ಲೈನ್ ಮ್ಯಾನ್ ಕೆಲಸದ ಜೊತೆಗೆ ಪರಿಸರ ಉಳಿಸುವ ಮಹತ್ಕಾರ್ಯ
ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣ ಹಾಗೂ ಸೆಮಿನಾರ್ ಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥಹುದೇ ಒರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಮಾದರಿಯಾಗಿರುವ ಈ ವ್ಯಕ್ತಿ ಯಾರು ಹಾಗೂ ಇವರ ಸಾಧನೆಯೇನು ಎನ್ನುವುದಕ್ಕೆ ಸಾಕ್ಷಿಪ್ರಜ್ಞೆಗಳೂ ಜಿಲ್ಲೆಯಲ್ಲೇ ಇವೆ.