ವಾರಾಂತ್ಯ ಲಾಕ್ಡೌನ್ ವಿರೋಧಿಸಿ ವ್ಯವಹಾರ ನಡೆಸಲು ಕರಾವಳಿ ವರ್ತಕರ ತೀರ್ಮಾನ
ದ. ಕ , ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯ ರಿಗೂ ಕೆಲ ವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆ ಯಾಗಿದ್ದು ಅವೈಜ್ಞಾನಿಕ ಮತ್ತು ತಾರ ತಮ್ಯ ಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು. ಪ್ರತೀ ಅಂಗಡಿಯವರು ಕೋವಿಡ್ 19 ರ ನಿಯಮ ಪಾಲಿಸಲು ಕಡ್ಡಾಯ ಸೂಚನೆ ನೀಡಲಾಗಿದೆ.
ಸಭೆಯಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗಡೆಯವರು ಮಾತನಾಡಿ ಲಾಕ್ಡೌನ್ ಹೇರುವ ನಿರ್ಧಾರದ ಹಿಂದೆ ಆನ್ಲೈನ್ ವ್ಯಾಪಾರದ ದೈತ್ಯ ಶಕ್ತಿಗಳ ಕೈವಾಡ ವಿದೇಎಂಬ ಶಂಕೆ ವ್ಯಕ್ತ ಪಡಿಸಿದರು.
ಹಿರಿಯ ವರ್ತಕರಾದ ಸಾಯಿದ್ ಇಸ್ಮಾಯಿಲ್ ಟೆರೇನ್ ಡಿ ಸೋಜ ಸುಲೋಚನಾ ಭಟ್ ಗೋಪಾಲ್ ಆರ್. ಎಚ್. ಹರೀಶ್ ಶೆಣೈ ರವಿ ಹೆಗ್ಡೆ ಅಬ್ದುಲ್ ಮುನೀರ್ ವಿನೋದ್,ಪ್ರಸಾದ್ ನಾಯರ್ ಸುಲೇಮಾನ್ ಸಾಗರ್ ರೆಹಮನ್ ಮುಂತಾದವರು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಮಾತನಾಡಿ ವರ್ತಕರು ಅತ್ಯಂತ ಕಷ್ಟದಲ್ಲಿದ್ದು ಅವರನ್ನು ಅವಲಂಬಿಸಿರುವ ಸಿಬ್ಬಂದಿ ಗಳ ಕುಟುಂಬಗಳ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಕುಟುಂಬಗಳ ಬದುಕಿನ ಪ್ರಶ್ನೆಯಾಗಿರುವುದರಿಂದ ಅನಿವಾರ್ಯವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಯಾರೂ ಆತಂಕ ಭಯ ಕ್ಕೆ ಒಳಗಾಗದಂತೆ ಧೈರ್ಯ ತುಂಬಿದರು.