ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸರ್ಕಾರ ಪಣತೊಟ್ಟಂತಿದೆ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ
ಬೆಲೆ ಏರಿಕೆಯಿಂದ ಜನ ಬೇಸತ್ತು ಜೀವನ ಸಾಗಿಸುವುದು ಕಷ್ಟ ಕರ ಪರಿಸ್ಥಿತಿ ಯಾಗಿದೆ.. ಶ್ರೀಮಂತರನ್ನು ಶ್ರೀಮಂತರಾಗಿಸುವ ಕೆಲಸ ಕಾರ್ಯ ವನ್ನು ಕೇಂದ್ರ ಹಾಗು ರಾಜ್ಯ ಸರಕಾರ ಮಾಡುತಿದೆ.. ಇದೀಗ ಬಿಜೆಪಿ ಪಕ್ಷದ ನಿಲುವು ಜನ ಸಾಮಾನ್ಯರಿಗೆ ಅರಿವಾಗುತ್ತಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ನತ್ತ ಯುವ ಜನರ ಒಲವು ಜಾಸ್ತಿಯಾಗುತಿದ್ದು..ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಗೊಳಿಸುವಲ್ಲಿ ಕಾರ್ಯಕರ್ತರು ತೊಡಬೇಕಾಗಿದೆ.ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೂರಕೆ ಹೇಳಿದರು.
ಅವರು ಹೆಜಮಾಡಿ ಬ್ರಹ್ಮ ಬೈದ್ಯೆರ್ ಕಟ್ಟಡದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು….
ಇದೇ ಸಂದರ್ಭ ಮಾಜಿ ತಾ.ಪ ಸದಸ್ಯೆ ದಿವಂಗತ ರೇಣುಕಾ ಪುತ್ರನ್ ರವರ ಸವಿನೆನಪಿಗಾಗಿ ಹಮ್ಮಿಕೊಂಡ ” ನನೆಪು 2021 ” ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಕೂಟದ ಪ್ರಚಾರ ಭಿತ್ತಿ ಪತ್ರವನ್ನು ವಿನಯ ಕುಮಾರ್ ಸೂರಕೆ ಬಿಡುಗಡೆ ಗೂಳಿಸಿದರು ಹಾಗೂ ನೂತನವಾಗಿ ಹೆಜಮಾಡಿ ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಗೆ ಅಯ್ಕೆ ಯಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮುಸ್ಸಿಯರ್, ಹೆಜಮಾಡಿ ನಾಗರಿಕ ಸಮಿತಿ ಉಪಾಧ್ಯಕ್ಷ ರಾಲ್ಫಿ ಡಿ ಕೋಸ್ಟಾ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಮಾಜಿ.ತಾ.ಪಂ.ಸದಸ್ಯ ದಿನೇಶ್ ಪಲಿಮಾರು, ದ.ಕ ಜಿಲ್ಲಾ ಕಾಂಗ್ರೆಸ್ ಪ್ರ ಕಾರ್ಯದರ್ಶಿ ಧನಂಜಯ ಮಟ್ಟು,
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಕೇಶವ ಸಾಲ್ಯಾನ್, ಸುಧಾಕರ್ ಕೆ ಉಪಸ್ಥಿತರಿದ್ದರು.