ಸರ್ಕಾರದ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆ ಟಾರ್ಗೆಟ್: ಯು.ಟಿ.ಖಾದರ್
ಜನಸಂಖ್ಯೆಯನ್ನು ದೇಶದ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕಾದದ್ದು ಸರ್ಕಾರದ ಕೆಲಸ. ಆದರೆ ಸರ್ಕಾರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆಯನ್ನು ಟಾರ್ಗೆಟ್ ಮಾಡಿರೋದು ದುರಂತ ಅಂತಾ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಒಂದು ಸರ್ಕಾರವು ಆಡಳಿತ ಮಾಡೋ ಮೊದಲು ದೇಶದ ಜನಸಂಖ್ಯೆಯನ್ನು ಹೇಗೆ ಮಾನವ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕೆಂಬುದನ್ನು ಅರಿಯಬೇಕು ಅಂದರು.
ಮಂಗಳೂರಲ್ಲಿ ಅವತ್ತು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯ್ತು. ಅವತ್ತು ನಾವೆಲ್ಲಾ ಆ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತದೆ, ರಾಜ್ಯಕ್ಕೆ ಏನಾದ್ರೂ ಕೊಡುಗೆ ಸಿಗುತ್ತದೆ ಎಂದು ಭಾವಿಸಿದ್ದೇವು. ಈ ಸಭೆಗೆ ಭಾರೀ ಪ್ರಚಾರ ಕೂಡಾ ಕೊಡಲಾಯಿತು. ಆದ್ರೆ ಸಭೆ ಮುಗಿದ ಸಂಜೆ ಮಾತ್ರ ನಾವು ಲವ್ ಜಿಹಾದ್ ತಡೆ ಕಾನೂನು ತರುತ್ತೀವಿ ಎಂದು ತೀರ್ಮಾನ ಮಾಡಿದ್ದೀವಿ ಅಂತಾ ಹೇಳಿ ಹೋರಟವರು ಎಲ್ಲಿಗೆ ಹೋದ್ರು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದರು. ಈಗ ಯುಪಿಯಲ್ಲಿ ಚುನಾವಣೆ ಬರುತ್ತೆ ಎಂದು ಹೊಸ ಸಬ್ಜೆಕ್ಟ್ ಹುಡುಕಿದ್ದಾರೆ. ಆಗ ಸಿಟಿ ರವಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ ಅವರು ದೇಶದ ಕಾನೂನು ಎಲ್ಲರಿಗೆ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.ಇತರ ದೇಶಗಳು ಪ್ರಧಾನಿ, ಮಂತ್ರಿ, ಶಾಸಕರನ್ನು ನೋಡಿ ಗೌರವ ಕೊಡುವುದಲ್ಲ, ಯೂತ್ ಶಕ್ತಿಯನ್ನು ನೋಡಿ ಬೆಂಬಲಿಸುತ್ತದೆ ಅಂದರು.