ಸುರತ್ಕಲ್ ಪರಿಸರಕ್ಕೆ ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ
ಸುರತ್ಕಲ್ ಪರಿಸರಕ್ಕೆ ವೀರಾ ಸಾವರ್ಕರ್ ಹೆಸರಿಡುವ ವಿಚಾರ ಬಗ್ಗೆ ಕಾಂಗ್ರೆಸ್ ಇತರ ಪಕ್ಷಗಳಿಂದ ವಿರೋಧ ಪ್ರತಿಭಟನೆ ವ್ಯಕ್ತವಾಗಿದೆ. ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ. ಅವ್ರೇನು ದೇಶ ದ್ರೋಹಿ ಅಲ್ಲ …ದುರಾದೃಷ್ಟ ಅವರನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ. ದೇಶದಲ್ಲಿ ಅನೇಕ ಕಡೆ ವಿದೇಶಿಯರ ಹೆಸರಿದೆ ಅದಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದರು.
ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದೇಶವನ್ನು ಆಳ್ವಿಕೆ ಮಾಡಿ ಲೂಟಿ ಮಾಡಿದವರ ಹೆಸರಿಗೆ ವಿರೋಧ ಇಲ್ಲ. ಆದ್ರೆ ದೇಶದ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದವರ ಹೆಸರಿಗೆ ವಿರೋಧವಿದೆ. ರಾಷ್ಟ್ರೀಯ ಹೋರಾಟಗಾರ ಹೋರಾಟವನ್ನು ಸ್ಥಳೀಯ ಹೋರಾಟಗಾರರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಳೀನ್ ಕುಮಾರ್ ಕಟೀಲ್ಗೆ ಜಿಲ್ಲಾ ಹೋರಾಟಗಾರರ ಹೆಸರಿಡುವ ಉದ್ದೇಶ ಇದೆ
ಈಗಾಗಲೇ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಲಾಗಿದೆ. ಅದಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.ಮುಂದಿನ ದಿನಗಳಲ್ಲಿ ರಾಣಿ ಅಬ್ಬಕ್ಕ, ಜಾರ್ಜ್ ಫರ್ನಾಂಡೀಸ್, ಶ್ರೀನಿವಾಸ್ ಮಲ್ಯರ ಹೆಸರಿಡುವ ಉದ್ದೇಶ ಇದೆ ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಲ್ಲೂ ಕೇಂದ್ರ ಆದೇಶದಂತೆ ಬೆಲೆ ಇಳಿಕೆ ಆಗಿದೆ.
ಆದ್ರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವ 6 ಕಡೆಗಳಲ್ಲಿ ಇನ್ನೂ ಬೆಲೆ ಇಳಿಕೆ ಮಾಡಿಲ್ಲ.ಉಪ ಚುನಾವಣೆ ಸೋತ ಹಿನ್ನೆಲೆ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕಾಂಗ್ರೆಸಿಗ್ಗರು ಹೇಳ್ತಾರೆ.ಆದ್ರೆ ಉಪ ಚುನಾವಣೆಗೂ ಬೆಲೆ ಇಳಿಕೆಗೂ ಸಂಬಂಧ ಇಲ್ಲ. ರಾಜ್ಯದಲ್ಲಿ ಬೆಲೆ ಇಳಿಕೆ ಬಗ್ಗೆ ಮುಖ್ಯ ಮಂತ್ರಿಗಳು ಚುನಾವಣೆಗೂ ಮೊದಲ ಮುನ್ಸೂಚನೆ ನೀಡಿದ್ರು. ಬಿಜೆಪಿ ಕಾರ್ಯಕರ್ತರು ಜನ್ರ ಸೇವೆಗಾಗಿ ಬೀದಿಗಿಳಿದಿದೆ ಆದ್ರೆ ಕಾಂಗ್ರೆಸ್ ಪ್ರತಿಭಟನೆಗಾಗಿ ಬೀದಿಗೆ ಇಳಿದಿದೆ.ಈಗಾಗಲೇ ವನಸ್ಪತಿ ಬೆಲೆ ಇಳಿಕೆಯಾಗುತ್ತಿದ್ದೆ. ಕ್ರಮೇಣ ಎಲ್ಲಾ ವಸ್ತುಗಳ ಬೆಲೆ ಇಳಿಕೆ ಆಗಲಿದೆ.ಪಕ್ಕದ ರಾಜ್ಯದ ಕೇರಳದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಆಗಿಲ್ಲ. ಇನ್ನೂ ಪಕ್ಕದ ರಾಜ್ಯದ ಕಾಸರಗೋಡಿನಿಂದ ಜನ್ರು ಜಿಲ್ಲೆಗೆ ಕಡಿಮೆ ಬೆಲೆ ಪೆಟ್ರೋಲ್ ಹಾಕಲು ಬರುದು ಗಮನಿಸಿದ್ದೇವೆ.ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.