ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ಹಾಗೂ ಯುವ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ ಇಂಧನ ಸಚಿವ ವಿ.ಸುನೀಲ್ ಕುಮಾರ್ ಉಪಸ್ಥಿಯಲ್ಲಿ ಸಾಂಗವಾಗಿ ನೆರವೇರಿತು.

ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಆಜಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ ಮಾಜಿ ಸೈನಿಕ ಶ್ರೀ ಗಣಪತಿ ಗೌಡ ಯೆಳ್ ಜಿತ್ ಇವರಿಗೆ ಯುವ ಮೋರ್ಚಾದ ವತಿಯಿಂದ ಮೂಕಾಂಬಿಕಾ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶರತ್ ಶೆಟ್ಟಿಯವರು ಬಿಜೆಪಿ ಯುವ ಮೋರ್ಚಾ ವತಿಯಿಂದ ನರೇಂದ್ರ ಮೋದಿಯವರ ಕಳಂಕ ರಹಿತ ಆಡಳಿತ ನಡೆಸಿ ಇಪ್ಪತ್ತು ವರ್ಷಗಳು ಸಲ್ಲುತ್ತಿದ್ದು,ಅದರ ಪ್ರಯುಕ್ತ ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ಮತ್ತು ಯುವ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ಜಿಲ್ಲೆಯಾದ್ಯಂತ ಉತ್ತಮ ಕೆಲಸವನ್ನು ಮಾಡುತ್ತಿದೆ ಹಾಗೂ ಪ್ರಧಾನ ಮಂತ್ರಿ ಮೋದಿಯವರ ಜನ್ಮದಿನವನ್ನು ಕೊಲ್ಲೂರಿನ ಸೌಪರ್ಣಿಕಾ ನದಿ ತಟವನ್ನು ಸ್ವಚ್ಛತೆ ಮಾಡುವುದರ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಇಂಧನ ಸಚಿವ ಶ್ರೀ ವಿ.ಸುನೀಲ್ ಕುಮಾರ್, ಬೈಂದೂರು ಶಾಸಕ ಶ್ರೀ ಸುಕುಮಾರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್,ಮಂಡಳಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ,ಅನುರ್ ಮೆಂಡನ್, ಕೊಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಸಂದೀಪ್ ಕೊಲ್ಲೂರು, ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.