Home Posts tagged #bainduru

ಬೈಂದೂರು: ಅಕಾಲಿಕ ಮಳೆಯಿಂದಾಗಿ ಭತ್ತದ ಕೃಷಿಗೆ ಜಲ ದಿಗ್ಬಂಧನ

ಬೈಂದೂರು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಭತ್ತದ ಫಸಲು ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಕೃಷಿಕರು ಕಂಗಾಲಾಗಿ ದಿಕ್ಕು ತೋಚದಂತಾಗಿದೆ. ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಪೈರುಗಳು ಹಾಗೂ ಕಟಾವಿನ ನಂತರ ಜಾನುವಾರುಗಳ ಒಣ ಹುಲ್ಲುಗಳು, ಜೊತೆಗೆ ಕಟಾವಿನ ನಡುವೆ ದ್ವಿದಳ ಧಾನ್ಯಗಳನ್ನು ಸಹ ಈಗಾಗಲೇ ಬಿತ್ತನೆ ಮಾಡಿದ್ದು, ಅದು ಕೂಡ ಮಳೆಯಿಂದ ಹಾನಿಯಾಗಿ ಅಪಾರವಾದ ಬೆಳೆ

ಕೊಲ್ಲೂರು : ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ್ ಮರಾಠಿ ಅವರಿಗೆ ಸನ್ಮಾನ

ಬೈಂದೂರು : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಹಾಗೂ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಇವರ ಸಹಯೋಗದಲ್ಲಿ ಬೈಂದೂರು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಎರಡು ದಿನಗಳ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಕ್ರೀಡಾಪಟು ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಮಂಜುನಾಥ್ ಮರಾಠಿ ಅವರ ಸಾಧನೆ ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ

ಬೈಂದೂರು: ಬಾಲಭವನ ಉದ್ಘಾಟನಾ ಕಾರ್ಯಕ್ರಮ

ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಸುಮಾರು 3.5 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತವಾದ ನೂತನ ಬಾಲ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಡಿಜಿಎಂ ಶ್ರೀಜೀತ್ ಬಾಲವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಕಲಿಕಾ ಚಟುವಟಿಕೆಗೆ ಬಾಲ ಭವನ ಬಹಳಷ್ಟು ಸಹಕಾರಿ ಆಗಲಿದೆ ಎಂದು ಶುಭಹಾರೈಸಿದರು. ನಿವೃತ್ತ ಡಿಜಿಎಂ ಶಶಿಧರ ಐತಾಳ್ ಮಾತನಾಡಿ,

ಬೈಂದೂರು: ವಿಹೆಚ್‍ಪಿ ಬಜರಂಗದಳದಿಂದ ಸರಣಿ ಗೋವುಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಗುಂಡೇಟಿನಿಂದ ಬಲಿಯಾದ ಸರಣಿ ಗೋ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯಾದ ನರಸಿಂಹ ಕುಲಾಲ್‍ನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಪ್ರತಿಭಟನೆ ಕೊಲ್ಲೂರಿನಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ವೆಲ್ ಅವರು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಸದಾಕಾಲ ವಿಶ್ವ ಹಿಂದು ಪರಿಷತ್ ನಿಮ್ಮೊಂದಿಗೆ

ಬೈಂದೂರು : ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಲಾರಿ, ಟೆಂಪೋ ಚಾಲಕರ ಮುಷ್ಕರ

ಬೈಂದೂರು ವಲಯ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ವತಿಯಿಂದ 3ಎ ಲೈಸೆನ್ಸ್ ರದ್ದು ಪಡಿಸಿರುವುದನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬೈಂದೂರು ಯಡ್ತರೆ ಸರ್ಕಲ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದೆ. ಬೈಂದೂರು ವಲಯ ಲಾರಿ ಮಾಲಿಕರ ಹಾಗೂ ಚಾಲಕರ ಸಂಘದ ಜಂಟಿ ಅಧ್ಯಕ್ಷ ನೆಲ್ಯಾಡಿ ದಿವಾಕರ ಶೆಟ್ಟಿ ಮಾತನಾಡಿ, ಈ ವರೆಗೆ ಇಲ್ಲದ

ಬೈಂದೂರು: ಪ್ರಧಾನಿ ಮೋದಿ ಹುಟ್ಟಿಹಬ್ಬದ ಪ್ರಯುಕ್ತ ಬಿಜೆಪಿಯಿಂದ ವಿವಿಧ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಿಜೆಪಿ ಬೈಂದೂರು ಮಂಡಲ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕ ದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಬೈಂದೂರಿನ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನ ಶಾರದಾ ಸಭಾಂಗಣದಲ್ಲಿ ನಡೆಯಿತು. ಚಿತ್ತೂರು ಮತ್ತು ತ್ರಾಸಿಯಲ್ಲಿ ಚಾ ಫೆ ಚರ್ಚಾ ಕಾರ್ಯಕ್ರಮವು ನಡೆಯಿತು.

ಬೈಂದೂರು: ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ತಲ್ಲೂರು ಸರಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ತ್ರೋಬಾಲ್ ಪಂದ್ಯಾಟ ತಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-

ಬೈಂದೂರು: ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೈಂದೂರು ಆಶ್ರಯದಲ್ಲಿ ಮೊಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಂದೂರು ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಎಲ್ಲಾ ಶಾಲೆಯ ಮಕ್ಕಳಿಗೆ ಗೆಲ್ಲಲು ಸ್ಫೂರ್ತಿ ನೀಡುವ ಮಾತುಗಳೊಂದಿಗೆ ಮಕ್ಕಳಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು ಶ್ರೀಯುತ

ಬೈಂದೂರು: ಸಹಾಯದ ನಿರೀಕ್ಷೆಯಲ್ಲಿ ಚಂದು ಕುಟುಂಬ

ಬೈಂದೂರು ತಾಲೂಕು ಕಚೇರಿಯ ಸಮೀಪದಲ್ಲಿರುವ ದರ್ಖಾಸ್ತು ಕಾಲೋನಿ ನಿವಾಸಿ ಚಂದು ಅವರ ಕುಟುಂಬಕ್ಕೆ ದಿಕ್ಕೇ ತೋಚದಂತಹ ಪರಿಸ್ಥಿತಿ ಇದೆ. ಕಿತ್ತು ತಿನ್ನುವ ಬಡತನದ ನಡುವೆ ಆಧಾರಸ್ಥಂಭವಾಗಿದ್ದ ಹಿರಿ ಮಗ ಪ್ರಕಾಶ್ ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಆರು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಎರಡು ವರ್ಷಗಳ ಹಿಂದಿನ ಭಾರೀ ಮಳೆಗೆ ಮನೆ ಮೇಲೆ ಮರ ಬಿದ್ದ ಕಾರಣ ಮನೆಯೂ ನಾಶವಾಗಿದೆ. ಇಂದು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಭೇಟಿ ನೀಡಿ ಚಂದು ಅವರ ಮನೆಯ

ಬೈಂದೂರು: ಅಶಕ್ತರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು: ಜಾತ್ರೆಗಳಲ್ಲಿ ವೇಷ ಹಾಕಿ ಹಣ ಸಂಗ್ರಹ

ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಲ್ಲಿ ಅಶಕ್ತರ ಚಿಕಿತ್ಸಾ ಸಹಾಯಾರ್ಥವಾಗಿ ಹಣ ಸಂಗ್ರಹಿಸುವ ಮೂಲಕ ಅಶಕ್ತಿರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು ಅವರು. ಬೆಂಕಿ ಮಣಿ ಸಂತು ಅಶಕ್ತರ ಚಿಕಿತ್ಸಾ ಸಹಾಯರ್ಥ ವಿಶೇಷ ವೇಷ ಧರಿಸಿ ಹಣಸಂಗ್ರಹಣೆ ಮಾಡುತ್ತಿರುವುದು ಇದೆ ಮೊದಲೇನಲ್ಲ… ಅದೆಷ್ಟೋ ಅನಾರೋಗ್ಯ ಪೀಡಿತರಿಗೆ ವಿವಿಧ ಜಾತ್ರೆಯಲ್ಲಿ ವೇಷ ಹಾಕುವುದರ ಮೂಲಕ ಹಣವನ್ನು