ಹೆದ್ದಾರಿ ಸೂಚನಾ ಫಲಕಗಳಿಗೆ ಕಂಟಕ: ಹೆದ್ದಾರಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ

ರಾಷ್ಟ್ರೀಯ ಹೆದ್ದಾರಿ ಸಂಚಾರಿಗಳಿಗೆ ಹೆದ್ದಾರಿಯ ಬಗೆಗಿನ ಮಾಹಿತಿ ನೀಡುತ್ತಿರುವ ಸೂಚನಾ ಫಲಕಗಳಿಗೆ ಕಟೌಟ್ ಗಳನ್ನು ಅಳವಡಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದರೂ ಹೆದ್ದಾರಿ ಇಲಾಖೆ ಮೌನವಾಗಿರುದು ಗಮನಿಸಿದರೆ ಇದರಿಂದ ಇಲಾಖೆ ಲಾಭ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.


ಇಂಥಹುದೇ ಕೃತ್ಯವನ್ನು ದೇವಸ್ಥಾನವೊಂದರ ಕಾರ್ಯಕ್ರಮದ ಕಟೌಟ್ ಅಳವಡಿಸುವ ಮೂಲಕ ಚಾಲನೆ ನೀಡಿದ್ದು ಇಲ್ಲಿ ಸ್ಮರಿಸ ಬಹುದಾಗಿದೆ. ಇದೀಗ ಅದು ಮುಂದುವರಿದು ಆಸ್ಕರ್ ನಿಧನದ ಕಟೌಟ್ ಗಳನ್ನು ರಾಜಕೀಯ ವ್ಯಕ್ತಿಗಳ ಹೆಸರಲ್ಲಿ ಹೆದ್ದಾರಿ ಎಲ್ಲೆಡೆ ಸೂಚನಾ ಫಲಕಗಳಿಗೆ.

ಅದೂ ಕೂಡ ಹೆದ್ದಾರಿಗೆ ಅಂಟಿಕೊಂಡು ಇರುವಂತೆ ಅಳವಡಿಸುವ ಮೂಲಕ ಅಪಘಾತಗಳಿಗೆ ಆಹ್ವಾನ ನೀಡುವಂತ್ತಿದ್ದರೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕಣ್ಣಿದ್ದೂ ಕುರುಡುತನ ಅನುಭವಿಸುತ್ತಿದ್ದಾರೆ. ಕಟೌಟ್ ನಿರ್ಮಾಣ ಸಂಸ್ಥೆಗಳಿಗೆ ಈ ಕಟೌಟ್ ನಿರ್ಮಾಣದ ಗುತ್ತಿಗೆ ನೀಡುವ ರಾಜಕೀಯ ವ್ಯಕ್ತಿಗಳಿಗೆ ಪ್ರಚಾರ ಹೊರತು ಜನರಿಗಾಗುವ ತೊಂದರೆ ಬಗ್ಗೆ ಚಿಂತಿಸುವ ಮನಸ್ಥಿತಿಯೇ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ತಕ್ಷಣವೇ ಇಂಥಹ ಕಾನೂನು ಬಾಹಿರವಾಗಿ ಅಳವಡಿಸಿರುವ ಕಟೌಟ್ ಗಳನ್ನು ತೆರವುಗೊಳಿಸುವಂತೆ ಜನ ಆಗ್ರಹಿಸಿದ್ದಾರೆ.

 

Related Posts

Leave a Reply

Your email address will not be published.