HomeFresh Newsಕಡಬದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ : 40 ಕೆಜಿ ದನದ ಮಾಂಸ ಸಹಿತ ಓರ್ವನ...

ಕಡಬದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ : 40 ಕೆಜಿ ದನದ ಮಾಂಸ ಸಹಿತ ಓರ್ವನ ವಶಕ್ಕೆ

ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು 4೦ ಕೆಜಿ ದನದ ಮಾಂಸ, ಕಟ್ಟಿ ಹಾಕಿದ್ದ 4 ಕರುಗಳು ಸೇರಿದಂತೆ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ಪರಾರಿಯಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕಳಾರ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಕಳಾರ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಶೆಡ್ ನಲ್ಲಿ ಅಕ್ರಮವಾಗಿ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಡಬ ಎಸ್‌ಐ ರುಕ್ಮನಾಯ್ಕ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹರೀಶ್, ಶ್ರೀಶೈಲ, ಹರೀಶ್ ಹಾಗೂ ಗೃಹರಕ್ಷಕ ದಳದ ಯೋಗೀಶ್, ಅನಿತ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments