HomeFresh Newsಕಡಬದಲ್ಲಿ ಅಡಿಕೆ ಚೀಲ ಕದ್ದೊಯ್ದ ಪ್ರಕರಣ: ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬದಲ್ಲಿ ಅಡಿಕೆ ಚೀಲ ಕದ್ದೊಯ್ದ ಪ್ರಕರಣ: ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು

ಕಡಬ :ಸುಲಿದು ಮಾರಾಟ ಮಾಡಲು ಅಂಗಳದಲ್ಲಿ ಇಟ್ಟಿದ್ದ ಅಡಿಕೆ ಚೀಲವೊಂದನ್ನು ಬೈಕ್ ನಲ್ಲಿ ಬಂದು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಅಡಿಕೆ ಚೀಲದೊಂದಿಗೆ ರಂದು ಕಡಬ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಅಲೆಪ್ಪಾಡಿಯ ಸುಕೇಶ ಎಂಬವರ ಮನೆಯಿಂದ ಅಡಿಕೆ ಚೀಲ ಕಳವಾಗಿತ್ತು.ಆರೋಪಿ ಪರಮೇಶ್ವರ್ ಎಂಬಾತನನ್ನು ಇಂದು ಮುಂಜಾನೆ ಆತನ ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಿ ಆತನು ಕಳವು ಮಾಡಿದ ಅಡಿಕೆಯನ್ನು ಮತ್ತು ಕಳವಿಗೆ ಉಪಯೋಗಿಸಿದ ಮೋಟರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ .

ಈತನ ವಿರುದ್ಧ ಅಪರಾಧ ಕ್ರಮಾಂಕ ನಂ 47/ 2021 ಕಲಂ 379 ಐಪಿಸಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಸ್.ಐ ರುಕ್ಮ ನಾಯ್ಕ್ ಸಹಿತ ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಭವಿತ್ ರೈ ಚಂದ್ರಶೇಖರ್, ಶ್ರೀಶೈಲ, ಮಹೇಶ್ , ದೀಪು ಪಾಲ್ಗೊಂಡಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments