HomeFresh Newsಕಾಪು ಹೊಸ ಮಾರಿಯಮ್ಮ ಸನ್ನಿಧಿಯಲ್ಲಿ ಆಟಿ ಮಾರಿಪೂಜೆ

ಕಾಪು ಹೊಸ ಮಾರಿಯಮ್ಮ ಸನ್ನಿಧಿಯಲ್ಲಿ ಆಟಿ ಮಾರಿಪೂಜೆ

ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಆಟಿ ಮಾರಿ ಪೂಜೆಯು ಕೊವೀಡ್ ಸಮಸ್ಯೆಯಿಂದಾಗಿ ಸರಳವಾಗಿ ನಡೆದಿದೆ.

ವಾರ್ಷಿಕವಾಗಿ ತುಳು ತಿಂಗಳುಗಳಾದ ಸುಗ್ಗಿ, ಜಾರ್ದೆ ಹಾಗೂ ಆಟಿ ಮಾರಿಪೂಜೆ ನಡೆಯುತ್ತಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಜಿಲ್ಲೆ ಹೊರಜಿಲ್ಲೆ, ಹೊರ ರಾಜ್ಯ, ದೇಶ ವಿದೇಶಗಳಿಂದಲೂ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದು, ಆದರೆ ಈ ಬಾರಿ ಕೋವಿಡ್ ಸಮಸ್ಯೆಯಿಂದಾಗಿ ಸರ್ಕಾರದ ಸೂಚನೆಯಂತೆ ಸರಳವಾಗಿ ನಡೆಯುವುದರಿಂದ ಭಕ್ತಾಧಿಗಳ ಸಂಖ್ಯೆಯೂ ವಿರಳ ವಾಗಿತ್ತು. ಶ್ರೀಕ್ಷೇತ್ರದಲ್ಲಿ ಪ್ರಮುಖವಾಗಿ ಕುಂಕುಮಾರ್ಚನೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಸರ್ವ ಸೇವೆಗಳು ನಡೆಯಿತು. ಅದಲ್ಲದೆ ಮಾರಿಯಮ್ಮ ದೇವಳ ಸಮಗ್ರ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ ಇರುವ ಕಾರಣ ಶಿಲಾ ಸೇವೆಯು ನಡೆಯುತ್ತಿದೆ. ಈ ಆಟಿ ಮಾರಿಪೂಜೆಯ ಸಂದರ್ಭ ಬಹುತೇಕ ಭಕ್ತಾಧಿಗಳು ಶಿಲಾ ಸೇವೆ ನೀಡುತ್ತಿದ್ದರಿಂದ ಈ ಬಾರಿ ದಾಖಲೆಯ ಸೇವೆ ಅರ್ಪಿತಗೊಂಡಿದೆ ಎಂದು ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ಮಾಹಿತಿ ನೀಡಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments