HomeFresh Newsಕುಳಾಯಿ : ಸರ ಕಸಿದು ಕಳ್ಳ ಪರಾರಿ : ಸಿಸಿ ಟಿವಿಯಲ್ಲಿ ಸೆರೆ

ಕುಳಾಯಿ : ಸರ ಕಸಿದು ಕಳ್ಳ ಪರಾರಿ : ಸಿಸಿ ಟಿವಿಯಲ್ಲಿ ಸೆರೆ

ಸುರತ್ಕಲ್‍ನ ಕುಳಾಯಿ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಎಸಗಿ ಕಳ್ಳ ಓಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಳಾಯಿ ನಿವಾಸಿ ಬಾಲಕೃಷ್ಣ ಪುರೋಹಿತ್ ಅವರ ಮನೆಗೆ ಕಳ್ಳನೋರ್ವ ನುಗ್ಗಿ ಅವರ ಪತ್ನಿ ಸುಮತಿ ಬಾಲಕೃಷ್ಣ ಆಚಾರ್ಯ ಅವರ ಕುತ್ತಿಗೆಯಿಂದ ನಾಲ್ಕು ಪವನ್ ಚಿನ್ನದ ಕರಿಮಣಿಯನ್ನು ಸೆಳೆದು ಪರಾರಿಯಾದ ಘಟನೆ ನಡೆದಿದೆ.ಇಬ್ಬರು ಯುವಕರು ಮಧ್ಯಾಹ್ನ ಮನೆಗೆ ಆಗಮಿಸಿ ಕಾಲಿಂಗ್ ಬೆಲ್ ಒತ್ತಿದ ಸಂದರ್ಭ ಸುಮತಿ ಅವರು ಮನೆಯ ಬಾಗಿಲು ತೆರೆದು ಹೊರಬಂದು ವಿಚಾರಿಸಿದಾಗ ತಕ್ಷಣ ಓರ್ವ ವ್ಯಕ್ತಿ ಸುಮತಿ ಅವರನ್ನು ಟವೆಲ್ ನಿಂದ ಒತ್ತಿ ಹಿಡಿದು ಕರಿಮಣಿ ಎಳೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಸಿಸಿ ಟಿವಿಯಲ್ಲಿ ಕೃತ್ಯ ಎಸಗಿ ಕಳ್ಳ ಓಡುತ್ತಿರುವ ದೃಶ್ಯ ಸೆರೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments