HomeFresh Newsಜು.14ರಂದು ಮದ್ಯದಂಗಡಿಗಳ ಸನ್ನದುಗಳ ಮರು ಹಂಚಿಕೆಗಾಗಿ ಈ ಹರಾಜು

ಜು.14ರಂದು ಮದ್ಯದಂಗಡಿಗಳ ಸನ್ನದುಗಳ ಮರು ಹಂಚಿಕೆಗಾಗಿ ಈ ಹರಾಜು

ಕರ್ನಾಟಕ ಸರ್ಕಾರವು ಸ್ಥಗಿತಗೊಂಡಿರುವ ಸಿಎಲ್ 2 a ಮಧ್ಯದಂಗಡಿಗಳ ಸನ್ನದುಗಳ ಮರು ಹಂಚಿಕೆಗಾಗಿ ಈ ಹರಾಜು (e-auctions) ಪ್ರಕ್ರಿಯೆ ಆರಂಭಿಸಿದ್ದು ಆಸಕ್ತ ಬಿಡುದಾರರ ಆನ್ಲೈನ್ ನೋಂದಣಿ ಜುಲೈ 3 ರಿಂದ ಆರಂಭವಾಗಿದೆ. ಈ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಂದಾಯಿತ ಬಿದ್ದುದಾರರು ಹಾಗೂ ಅಬಕಾರಿ ಇಲಾಖೆಯ ನೋಡಲ್ ಅಧಿಕಾರಿಗಳಿಗಾಗಿ ಜುಲೈ 14 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ. ಪ್ರಕ್ರಿಯೆಯು ಜುಲೈ 24 ರಿಂದ 31ರವರೆಗೆ ನಡೆಯಲಿದೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 29 ಸಿಎಲ್ 2ಎ ಮಧ್ಯದಂಗಡಿಗಳ ಸನ್ನದುಗಳನ್ನು ಹರಾಜಿಗೆ ಗುರುತಿಸಲಾಗಿದೆ ಇದರಲ್ಲಿ ಪುತ್ತೂರು ಅಬಕಾರಿ ವಲಯ ವ್ಯಾಪ್ತಿಯ ಎರಡು ಮಧ್ಯದ CL-2 ಮದ್ಯದಂಗಡಿಗಳು ಸೇರಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ಲೈನ್ ನಲ್ಲಿ ನೊಂದಾಯಿಸಿಕೊಂಡು ಈ ಹರಾಜು ಪ್ರಕ್ರಿಯೆ ಹಾಗೂ ತರಬೇತಿ ಶಿಬಿರದಲ್ಲಿ ಭಾಗವಹಿಸುವಂತೆ ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Swarna- add
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments