ಸ್ಯಾಕ್ಸೋಫೋನ್ ಚಕ್ರವರ್ತಿ, ಪದ್ಮಶ್ರೀ ಪುರಸ್ಕøತ ಡಾ.ಕದ್ರಿ ಗೋಪಾಲನಾಥ್ ಅವರ ಜನ್ಮದಿನದ ಅಂಗವಾಗಿ ಡಿಸೆಂಬರ್ 6ರಂದು ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಡಾ.ಕದ್ರಿ ಗೋಪಾಲನಾಥ್‍ರವರ ಸಮಾಧಿಯ ಜಾಗದಲ್ಲಿ ‘ಕದ್ರಿ ಸಂಗೀತ ಸೌರಭ-2021’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಣಿಕಾಂತ್ ಕದ್ರಿ ಹೇಳಿದರು.
ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ನನ್ನ ತಂದೆಯವರಾದ ಡಾ.ಕದ್ರಿ ಗೋಪಾಲನಾಥ್ ಅವರ ಜನ್ಮದಿನವಾದ ಡಿಸೆಂಬರ್ 6ರಂದು ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಅವರ ಸಮಾಧಿಯ ಜಾಗದಲ್ಲಿ ‘ಕದ್ರಿ ಸಂಗೀತ ಸೌರಭ-2021’ಕಾರ್ಯಕ್ರಮವನ್ನು ಆಯೋಜಸಿದ್ದೇವೆ.
ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವ ಸಾಧಕರಿಗೆ ಡಾ.ಕದ್ರಿ ಗೋಪಾಲನಾಥ್ ಲೈಫ್ ಟೈಮ್ ಅಚಿವ್‍ಮೆಂಟ್ ಅವಾರ್ಡ್ ನೀಡಲಿದ್ದೇವೆ, ಅಲ್ಲದೇ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಸೇರಿದಂತೆ ತಂದೆಯವರ ಅಭಿಮಾನಿಗಳು ಮತ್ತು ಶಿಷ್ಯಂದಿರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿ.6ರಂದು ಡಾ.ಕದ್ರಿ ಗೋಪಾಲನಾಥ್‍ರವರ ಜನ್ಮದಿನ ಆಚರಣೆ
RELATED ARTICLES
