HomeFresh Newsತಮಿಳುನಾಡು ಮರಳಿ ಅರಳು ಆದರಾಂಧ್ರ, ಪಾಂಡಿಚೇರಿ!

ತಮಿಳುನಾಡು ಮರಳಿ ಅರಳು ಆದರಾಂಧ್ರ, ಪಾಂಡಿಚೇರಿ!

ಆರು ದಶಕಗಳ ಬಳಿಕ ಕಾಂಗ್ರೆಸ್ ಶಾಸಕರಿಬ್ಬರು ತಮಿಳುನಾಡಿನಲ್ಲಿ ಮಂತ್ರಿಗಳಾಗಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರ ಸಂಖ್ಯೆ ಹಿಂದೆ ಇದ್ದುದಕ್ಕಿಂತ ಕಡಿಮೆ, ಐದು ಮಾತ್ರ ಆಗಿದೆ. ಕೇರಳದಲ್ಲಿ ದಶಕದ ಬಳಿಕ ಮತ್ತೆ ಯುಡಿಎಫ್ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಮೈತ್ರಿ ಪಕ್ಷಗಳ ಬಲ ಹೆಚ್ಚಿದೆ ಎಂಬುದು ಗಮನಾರ್ಹ.

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಇದೆ. ಅಲ್ಲಿ ಕೂಡ ಅದು ದಶಕದ ಬಳಿಕ ಅಧಿಕಾರಕ್ಕೆ ಮರಳಿತ್ತು.ಆಂಧ್ರದಲ್ಲಿ ಮೊದಲು ಕಾಂಗ್ರೆಸ್ ಶಾಸಕ ಆಗಿದ್ದ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ; ಕಾಂಗ್ರೆಸ್ಸಿನಲ್ಲಿದ್ದ ಜಗನ್ ಮೋಹನ್ ರೆಡ್ಡಿ ಪ್ರತಿಪಕ್ಷದ ನಾಯಕ. ಆದರೆ ಅಲ್ಲಿ ಕೂಡ ಕಾಂಗ್ರೆಸ್ ಶಾಸಕರ ಸಂಖ್ಯೆ ಇಳಿವಣಿಗೆ ಕಂಡಿದೆ. ಪಾಂಡಿಚೇರಿಯಲ್ಲೂ ಕಳೆದ ಬಾರಿಗಿಂತ ಕಾಂಗ್ರೆಸ್ಸಿನ ಒಬ್ಬ ಶಾಸಕ ಕಡಿಮೆ ಆಗಿದ್ದಾರೆ.

ಕರ್ನಾಟಕದಲ್ಲಿ 1989ರ ಬಳಿಕ ಕಾಂಗ್ರೆಸ್ ನೇರ ಎರಡನೆಯ ಅವಧಿಗೆ ಗೆದ್ದಿಲ್ಲ; ಅವಧಿ ಬಿಟ್ಟು ಅವಧಿ ಗೆಲ್ಲುತ್ತಿದೆ.ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 1983ರಲ್ಲಿ ಮೊದಲು ಲೋಕದಳದಿಂದ ಶಾಸಕರಾದಾಗಿನಿಂದಲೂ ಅವರು ಒಂದಲ್ಲ ಒಂದು ಹುದ್ದೆಯಲ್ಲಿ ಇದ್ದವರು. ಈಗ ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ತೆರವಾಗಿದೆ. ಮುಂದೆ ಅವರುಂಟು ಅವರ ಆಡಳಿತದಿಂದ ಜನರನ್ನು ಮೆಚ್ಚಿಸುವುದುಂಟು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments