ಬಿಜೆಪಿಯ ಮಾಜೀ ಶಾಸಕ ಗೂಳಿಹಟ್ಟಿ ಶೇಖರ್ ಅವರು ನಾಗಪುರದ ಸಂಘ ಕೇಂದ್ರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ದಲಿತ ಎಂದು ನನಗೆ ಪ್ರವೇಶ ಕೊಡಲಿಲ್ಲ ಎಂದು ದೂರಿದ್ದಾರೆ. ಅದೇ ಸಮಯದಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲಿ ಹೆಚ್ಚು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿರುವುದು ವರದಿಯಾಗಿದೆ. ಇವೆಲ್ಲ ಒಳ ವೈರುಧ್ಯದ ವಿಷಯಗಳು. ಇದಕ್ಕೆ ಸಂವಾದಿಯಾಗಿ ಬಿಜೆಪಿ
ತೆಲಂಗಾಣದಲ್ಲಿ ವೈಎಸ್‌ಆರ್ ಪಕ್ಷವನ್ನು ಸ್ಥಾಪಿಸಿದ್ದ ಹಿಂದಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ರಾಜಶೇಖರ ರೆಡ್ಡಿಯವರ ಮಗಳು ಮತ್ತು ಈಗಿನ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರ ಸಹೋದರಿ ವೈ. ಎಸ್. ಶರ್ಮಿಳಾ ಅವರು ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸೇರಿದ್ದಲ್ಲದೆ ತಮ್ಮ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ
ತೆಲಂಗಾಣ ರಾಜ್ಯ ವಿಧಾನ ಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣವಚನ ಸ್ವೀಕಾರವನ್ನು ಡಿಸೆಂಬರ್ 9ರ ಶನಿವಾರ ಇಟ್ಟುಕೊಳ್ಳಲಾಗಿದ್ದು, ಅಕ್ಬರುದ್ದಿನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿಯ ಶಾಸಕರು ಪ್ರಮಾಣವಚನ ಸಮಾವೇಶವನ್ನೇ ಬಹಿಷ್ಕರಿಸಿದರು. ಘೋಷಾಮಹಲಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅವರು ನಾನು ಬದುಕಿರುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆವೇಶದಿಂದ ಘೋಷಣೆ ಮಾಡಿದರು.
ತೆಲಂಗಾಣದ ಹೊಸ ಸಂಪುಟದಲ್ಲಿ ಬುಡಕಟ್ಟು ಪ್ರತಿನಿಧಿಯಾಗಿ ಇರುವವರು ದನ್ಸರಿ ಅನಸೂಯ. ಇವರು ಜನರ ನಡುವೆ ಸೀತಕ್ಕ ಎಂದೇ ಪ್ರಸಿದ್ಧರು. ಸಣ್ಣ 14ರ ಪ್ರಾಯದಲ್ಲೇ ಜನಶಕ್ತಿ ನಕ್ಸಲ್ ಗುಂಪು ಸೇರಿ ಹೋರಾಟ ಮಾಡಿದವರು. ಅನಂತರ ಭ್ರಮ ನಿರಸನಗೊಂಡು ಸಾರ್ವಜನಿಕ ಕ್ಷಮಾದಾನದಡಿ ಶರಣಾಗಿದ್ದರು. ಮುಂದೆ ಓದಿ ವಕೀಲೆ ಆದುದಲ್ಲದೆ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಮಾಡಿದರು. ಈ ನಡುವೆ ಬುಡಕಟ್ಟು ಜನರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು, ತೆಲುಗು ದೇಶಂ ಸೇರಿ
ತೆಲಂಗಾಣ ರಾಜ್ಯವಾದ ಬಳಿಕ ಕಾಂಗ್ರೆಸ್ ಪಕ್ಷದ ಮೊದಲ ಮತ್ತು ಆ ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿಯವರು ಉಪ ಮುಖ್ಯಮಂತ್ರಿ ಮತ್ತು 11 ಮಂತ್ರಿಗಳ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ತೆಲಂಗಾಣದ ಉಪ ಮುಖ್ಯಮಂತ್ರಿಯಾಗಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಅಧಿಕಾರದ ದೀಕ್ಷೆ ತೆಗೆದುಕೊಂಡರು. ಎನ್. ಉತ್ತಮ ಕುಮಾರ್
ಆಂಧ್ರ ಮತ್ತು ತೆಲಂಗಾಣದ ನಡುವೆ 66% ಮತ್ತು 34% ನಾಗಾರ್ಜುನ ಸಾಗರ ನೀರಿನ ಹಂಚಿಕೆ ಒಪ್ಪಂದ ಆಗಿದೆ. ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮಾದರಿಯ ಗಲಾಟೆ ಆಂಧ್ರ ಮತ್ತು ತೆಲಂಗಾಣದ ನಡುವೆ ನಡೆದಿದೆ. ಕೃಷ್ಣ ನದಿಗೆ ಕಟ್ಟಿರುವ ನಾಗಾರ್ಜುನ ಸಾಗರವು ಆಂಧ್ರವು ವಿಭಜನೆಗೊಂಡ ಬಳಿಕವೂ ಭಾರೀ ವಿವಾದಕ್ಕೆ ಏನೂ ಕಾರಣವಾಗಿಲ್ಲ. ಆದರೆ ತೆಲಂಗಾಣದಲ್ಲಿ ಮತದಾನ ನಡೆಯುವ ದಿನ ಆಂಧ್ರದ 700 ಪೋಲೀಸರು ನುಗ್ಗಿ ಬಂದು ನಾಗಾರ್ಜುನ ಸಾಗರ ಅಣೆಕಟ್ಟಿನಿಂದ ನೀರು