HomeFresh Newsತುಳುವರ ನೆಚ್ಚಿನ ಕಮಲ ದೊಡ್ಡ ಇನ್ನಿಲ್ಲ

ತುಳುವರ ನೆಚ್ಚಿನ ಕಮಲ ದೊಡ್ಡ ಇನ್ನಿಲ್ಲ

ಮೂಡುಬಿದಿರೆ: “ತುಳುವರ ನೆಚ್ಚಿನ ಕಮಲ ದೊಡ್ಡ” ಎಂದೇ ಜನಪ್ರಿಯರಾಗಿದ್ದ ಮೂಡುಬಿದಿರೆ ತಾಲೂಕಿನ ಮಾರ್ನಾಡು ನಿವಾಸಿ, ಕಮಲ ದೊಡ್ಡ(85) ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.

ಶುಕ್ರವಾರ ಅವರ ಕಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಅವರು ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಾನಾ೯ಡಿನ ದಿವಂಗತ ದೊಡ್ಡಣ್ಣ ಶೆಟ್ಟಿಯ ಪತ್ನಿ, ಬೊಲ್ಪು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀನಿಥ್ ಶೆಟ್ಟಿ ಮಾರ್ನಾಡ್ ಅವರ ಅಜ್ಜಿಯಾಗಿದ್ದ ಕಮಲ ದೊಡ್ಡ(ಅಜ್ಜಿ), ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಶ್ರೀನಿತ್ ಶೆಟ್ಟಿ ಅವರ ವಿಡಿಯೊಗಳಲ್ಲಿ ತಮ್ಮ ಸರಳ, ಹಾಸ್ಯಭರಿತ ಮಾತುಗಳ ಮೂಲಕ ಜನರ ಗಮನ ಸೆಳೆದಿದ್ದರು. ಕಮಲ ದೊಡ್ಡ ಅವರ ಮಾತಿನ ಶೈಲಿ ಮತ್ತು ಸಹಜ ವ್ಯಕ್ತಿತ್ವವು ತುಳು ನಾಡಿನ ಜನರಲ್ಲಿ ವಿಶೇಷ ಅಭಿಮಾನವನ್ನು ಗಳಿಸಿಕೊಟ್ಟಿತ್ತು. ಅನೇಕ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments