HomeFresh Newsದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ: ಬೆಳ್ತಂಗಡಿಯಲ್ಲಿ ರೈತ ಸಂಯುಕ್ತ ಮೋರ್ಚಾದಿಂದ ಪ್ರತಿಭಟನೆ

ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ: ಬೆಳ್ತಂಗಡಿಯಲ್ಲಿ ರೈತ ಸಂಯುಕ್ತ ಮೋರ್ಚಾದಿಂದ ಪ್ರತಿಭಟನೆ

“ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ” ಘೋಷಣೆಯಡಿಯಲ್ಲಿ ಭಾರತಾದ್ಯಂತ ಪ್ರತಿಭಟನೆ ನಡೆಸಿ ದೆಹಲಿಯಲ್ಲಿ ಕಳೆದ ಏಳು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಹೋರಾಟ ನಡೆಸಲು ರೈತ ಸಂಯುಕ್ತ ಮೋರ್ಚ ನೀಡಿದ ಕರೆಯಂತೆ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು.

ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಮಾತಾಡುತ್ತಾ ಕೊರೋನಾ ಸಂಕಷ್ಟದ ಲಾಕ್ ಡೌನ್ ಸಮಯದಲ್ಲಿ ರೈತ ವಿರೋದಿಯಾಗಿ ರೈತ ಪರ ಮಸೂದೆಗಳ ತಿದ್ದುಪಡಿ ಮಾಡಿದ ಬಿಜೆಪಿ ಸರಕಾರದ ನಡೆ ಭಾರತೀಯರ ವಿರುದ್ದವಾದ ನಡೆಯಾಗಿದೆ. ಕಳೆದ ಏಳು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದನೆ ನೀಡದ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತೀಯರ ಪಾಲಿಗೆ ಬ್ರೀಟೀಶ್ ಸರಕಾರಕ್ಕಿಂತಲೂ ಕೆಟ್ಟದ್ದಾಗಿದೆ ಎಂದು ಸಾಭೀತು ಮಾಡುತ್ತಿದ್ದಾರೆ ರೈತ ವಿರೋದಿಯಾದ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆಗೆ ತಂದ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ಹಿಂಪಡೆದು ರೈತರ ಬೇಡಿಕೆ ಈಡೇರಿಕೆ ಆಗುವ ತನಕ ನಮ್ಮ ಹೋರಾಟ ನಿಲ್ಲದು ಎಂದರು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments