ಮೂಡುಬಿದಿರೆ: ಯಕ್ಷಗಾನ ಭಾಗವತ ದಿ.ಎಸ್. ಪುಂಡಳೀಕ ಶೆಣೈ ಅವರ ಸಹೋದರ ಎಸ್. ಕೃಷ್ಣ ಶೆಣೈ ಮೂಡುಬಿದಿರೆ( 91ವ) ಶನಿವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರಿ, ಪುತ್ರ ನ್ಯಾಯವಾದಿ ಎಸ್. ಮನೋಜ್ ಶೆಣೈ ಸಹಿತ ಬಂಧು ವರ್ಗವನ್ನು ಅಗಲಿದ್ದಾರೆ. ಹಲವು ದಶಕಗಳ ಕಾಲ ಮೂಡುಬಿದಿರೆಯಲ್ಲಿ ದಿನಸಿ ವರ್ತಕರಾಗಿದ್ದ ಕೃಷ್ಣ ಶೆಣೈ ಅವರು ಸಮಾಜ ಸೇವೆ ಸಹಿತ ಜ್ಯೋತಿಷ್ಯ ಮಾರ್ಗದರ್ಶಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ನಿಧನ: ಎಸ್. ಕೃಷ್ಣ ಶೆಣೈ ಮೂಡುಬಿದಿರೆ
RELATED ARTICLES

