HomeFresh Newsಪಡುಬಿದ್ರೆಯಲ್ಲಿ ಡಿ. 6ರಂದು ಸತ್ಯನಾರಾಯಣ ಪೂಜೆ ಸತ್ಯನಾರಾಯಣ ಪೂಜಾ ಸಮಿತಿ ರಚನೆ; ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ...

ಪಡುಬಿದ್ರೆಯಲ್ಲಿ ಡಿ. 6ರಂದು ಸತ್ಯನಾರಾಯಣ ಪೂಜೆ ಸತ್ಯನಾರಾಯಣ ಪೂಜಾ ಸಮಿತಿ ರಚನೆ; ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಆಯ್ಕೆ

ಪಡುಬಿದ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ) ಉಡುಪಿ ವಲಯದ ವತಿಯಿಂದ ಡಿಸೆಂಬರ್ 6ರಂದು ಪಡುಬಿದ್ರೆಯ ಪ್ರಸನ್ನ ಪಾರ್ವತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಯೋಜನಾಧಿಕಾರಿ ಮಮತಾ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಭುಜಂಗ ಆಚಾರ್ಯ ಅವರ
ಮುಂದಾಳತ್ವದಲ್ಲಿ ಪಟ್ಟಾಭಿರಾಮ ಮಂಗಲ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಪೂಜಾ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಿ, ಸತ್ಯನಾರಾಯಣ ಪೂಜಾ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷರಾಗಿ ಶಶಿಕಾಂತ್, ನೀತ ಗುರುರಾಜ್ ಮತ್ತು ಸುಧಾಕರ್ ಮಡಿವಾಳ, ಕಾರ್ಯದರ್ಶಿಯಾಗಿ ಜಗದೀಶ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಹಾಗೂ ಕೋಶಾಧಿಕಾರಿಯಾಗಿ ಯೋಗೀಶ್ ಪಲಿಮಾರು ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಕೇಶವ್ ಅಮೀನ್, ಡಾ. ಎನ್.ಟಿ. ಅಂಚನ್, ರಾಜೇಶ್ ದೇವಾಡಿಗ, ವೈ. ಸುಧೀರ್ ಕುಮಾರ್, ವಿಶು ಕುಮಾರ್ ಶೆಟ್ಟಿ, ಸಂದೀಪ್, ಜಗದಾಭಿರಾಮ, ದಯಾನಂದ ಹೆಜಮಾಡಿ ಮತ್ತು ಸುಧಾಕರ್ ಕರ್ಕೇರ ಅವರನ್ನು ನೇಮಿಸಲಾಯಿತು.
ಸಲಹೆಗಾರರಾಗಿ ವಿಜಯ್ ಆಚಾರ್ಯ ಮತ್ತು ರಾಜೇಶ್ ದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರು
ಪವಿತ್ರ, ಗಾಯತ್ರಿ ಡಿ. ಪ್ರಭು, ಗಿರೀಶ್ ದೇವಾಡಿಗ, ಆಶಾ ಪ್ರಶಾಂತ್ ಪಲಿಮಾರು, ಪದ್ಮನಾಭ ಆಚಾರ್ಯ, ರಮಾನಂದ ದೇವಾಡಿಗ ಹಾಗೂ ಪಾರ್ವತಿ ಹೆಜಮಾಡಿ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments