HomeFresh Newsಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ:ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ಸ್ವಚ್ಚತಾ ಕಾರ್ಯ

ಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ:ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ಸ್ವಚ್ಚತಾ ಕಾರ್ಯ

ಮಂಗಳೂರಿನ ಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ವಿ4 ನ್ಯೂಸ್‌ನ ವರದಿಗೆ ಎಚ್ಚೆತ್ತು ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿದೆ. ಇನ್ನು ನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛ ಕಾರ್ಯವನ್ನು ಕೈಗೊಂಡಿದ್ದಾರೆ.

ಪಣಂಬೂರು ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಬೀಚ್ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಸಮುದ್ರಕ್ಕೆ ಪ್ರವಾಸಿಗರೇ ಎಸೆದ ಕಸ ಈಗ ದೊಡ್ಡ ತ್ಯಾಜ್ಯ ರಾಶಿಯಾಗಿ ದಡಸೇರಿತ್ತು. ಪ್ಲಾಸ್ಟಿಕ್ ಬಾಟಲಿ, ಮಕ್ಕಳ ಆಟಿಕೆ, ತಿಂಡಿ ತಿನಿಸಿನ ಪ್ಲಾಸ್ಟಿಕ್, ಬಟ್ಟೆಗಳು ಸೇರಿ ಇತರೆ ವಸ್ತುಗಳಿಗ ದಡದಲ್ಲಿ ರಾಶಿ ರಾಶಿಯಾಗಿ ಬಿದ್ದಿದೆ.

ಈ ಕುರಿತು ವಿ4ನ್ಯೂಸ್ ವಿಸ್ಕೃತ ವರದಿಯನ್ನ ಮಾಡಿತ್ತು. ಇದಕ್ಕೆ ಎಚ್ಚೆತ್ತ ಅಧಿಕಾರಿಗಳು, ಇಂದು ಮುಂಜಾನೆ ನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛ ಕಾರ್ಯವನ್ನು ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments