HomeUncategorizedಪತ್ರಕರ್ತನಿಗೆ ದೂರವಾಣಿ ಮೂಲಕ ಬೆದರಿಕೆ- ಸುಳ್ಯ ಪ್ರೆಸ್ ಕ್ಲಬ್ ಖಂಡನೆ: ಪತ್ರಕರ್ತನಿಂದ ಪೊಲೀಸ್‌ ದೂರು

ಪತ್ರಕರ್ತನಿಗೆ ದೂರವಾಣಿ ಮೂಲಕ ಬೆದರಿಕೆ- ಸುಳ್ಯ ಪ್ರೆಸ್ ಕ್ಲಬ್ ಖಂಡನೆ: ಪತ್ರಕರ್ತನಿಂದ ಪೊಲೀಸ್‌ ದೂರು

ಸುಳ್ಯ :ಸುಳ್ಯದ ಸ್ಥಳೀಯ ಅಮರಸುದ್ದಿ ಪತ್ರಿಕೆಯ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ವಿಕಾಸ್ ಮೀನಗದ್ದೆ ಎಂಬವರು ದೂರವಾಣಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಘಟನೆಯನ್ನು ಸುಳ್ಯ ಪ್ರೆಸ್ ಕ್ಲಬ್ ಖಂಡಿಸಿದೆ.ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಘಟನೆಯನ್ನು ಖಂಡಿಸಲಾಯಿತು ಮತ್ತು ಪೋಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಪ್ರೆಸ್ ಕ್ಲಬ್‌ ಪದಾಧಿಕಾರಿಗಳು ಮತ್ತುಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಮೊಬೈಲ್ ಸಿಮ್‌ ಕಾರ್ಡ್ ವಿಚಾರಕ್ಕೆ ಸಂಬಂಧಿಸಿ ಬೆದರಿಕೆ ಹಾಕಲಾಗಿದೆ ಎಂದು ಮಿಥುನ್ ಪೊಲೀಸ್ ದೂರು ನೀಡಿದ್ದಾರೆ.ಮಿಥುನ್ ನನ್ನ ತಾಯಿಯ ಜತೆ ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ತಾಯಿಯ ಮೊಬೈಲ್ ಸಿಮ್ ಸರಿ ಪಡಿಸಿ ಬಂದಿದ್ದು, ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಸಂಸ್ಥೆಯು ಬಿ.ಎಸ್.ಎನ್.ಎಲ್ ಸಿಮ್‌ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಯಾರೋ ವ್ಯಕ್ತಿಗಳು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಸಂಸ್ಥೆಯ ವಿಕಾಸ್‌ರವರು ಆ ದೂರು ಮಾಡಿರುವುದು ಮಿಥುನ್ ಎಂದು ತಿಳಿದು ಅವರ ಮಾವನ ಮೊಬೈಲ್‌ಗೆ ಹಾಗೂ ಮಿಥುನ್ ಅವರ ಮೊಬೈಲ್‌ಗೂ ಫೋನ್ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಿಥುನ್ ಪೋಲೀಸರಿಗೆ ದೂರು ನೀಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments