ಕೆಲಸಕ್ಕೆಂದು ಮನೆಯಿಂದ ಹೊರಟ 47 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಎಕ್ಕೂರು ಬಳಿ ನಡೆದಿದೆ. ಜೂನ್ 3ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿದ ದಯಾನಂದ್ ಎಂಬುವವರು ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಎಕ್ಕೂರಿನ ನಡಿಕುತ್ತು ಕಾಂಪೌಂಡ್ ನಿವಾಸಿಯಾದ ಬೇಬಿ ಎಂಬವರ ದಯಾನಂದ್ (47 ವರ್ಷ) ನಾಪತ್ತೆಯಾದವರು. ದಯಾನಂದ್ ಅವರು ಕಳೆದ 7ವರ್ಷಗಳಿಂದ ಕುಲಶೇಖರದ ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಜೂನ್ 3ರ ಬುಧವಾರದಂದು ಬೆಳಿಗ್ಗೆ 6.30ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ದಯಾನಂದ್, ಸಾಮಾನ್ಯವಾಗಿ ಸಂಜೆ 5 ಗಂಟೆಗೆ ಮನೆಗೆ ಮರಳುತ್ತಿದ್ದರು. ಆದರೆ ಅಂದು ರಾತ್ರಿಯಾದರೂ ಅವರು ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
ನಾಪತ್ತೆಯಾದ ದಯಾನಂದ್ ಅವರ ಬಗ್ಗೆ ಸ್ನೇಹಿತರು, ಪರಿಚಯಸ್ಥರು ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದಯಾನಂದ್ ಅವರು ಚಿಕ್ಕ ವಯಸ್ಸಿನಲ್ಲಿ ಮೇಲಿಂದ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಸ್ವಲ್ಪ ಮಟ್ಟಿನ ಮರೆವಿನ ಕಾಯಿಲೆ ಹೊಂದಿದ್ದರು ಎನ್ನಲಾಗಿದೆ. ದಯಾನಂದ ಅವರು ಪತ್ತೆಯಾದರೆ
ನಾಪತ್ತೆಯಾಗಿರುವ ದಯಾನಂದ್ ಅವರ ಚಹರೆ ಹಾಗೂ ಗುರುತುಗಳು ಈ ಕೆಳಗಿನಂತಿವೆ:
ಎತ್ತರ: 5 ಅಡಿ 4 ಇಂಚು
ಮೈಬಣ್ಣ: ಕಪ್ಪು ಮೈಬಣ್ಣ, ದುಂಡು ಮುಖ ಮತ್ತು ಸಣ್ಣ ಶರೀರ
ಧರಿಸಿದ್ದ ಉಡುಪು: ಗೋಲ್ಡನ್ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್
ವಿಶೇಷ ಗುರುತು: ಬಲ ಕೈಯಲ್ಲಿ ತಾಮ್ರದ ಕಡಗ ಧರಿಸಿದ್ದಾರೆ.
ಮಾತನಾಡುವ ಭಾಷೆ: ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ ಹಾಗೂ ತೊದಲು ನುಡಿಯುವ ಸ್ವಭಾವ ಹೊಂದಿದ್ದಾರೆ.
ನಾಪತ್ತೆಯಾಗಿರುವ ದಯಾನಂದ್ ಅವರು ಪತ್ತೆಯಾದ್ರೆ 7022471643 ಮೊಬೈಲ್ ನಂಬರ್ಗೆ ಕರೆ ಮಾಡಿ ತಿಳಿಸಬಹುದು.

