HomeFresh Newsಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರು ಹಾಗೂ ದೈವಗಳ ದೇವಸ್ಥಾನ ಪಡುವರಿ ನೂತನ...

ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರು ಹಾಗೂ ದೈವಗಳ ದೇವಸ್ಥಾನ ಪಡುವರಿ ನೂತನ ದೇಗುಲಗಳ ಲೋಕಾರ್ಪಣೆ

ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ದೇವರು ಹಾಗೂ ದೈವಗಳ ದೇವಸ್ಥಾನ ಪಡುವರಿ
ನೂತನ ದೇಗುಲಗಳ ಲೋಕಾರ್ಪಣೆ ಹಾಗೂ ದೇವರು, ದೈವಗಳ ಪುನ‌ರ್ ಪ್ರತಿಷ್ಠಾ ಮಹೋತ್ಸವ ದಿನಾಂಕ 04-05-2025ನೇ ರವಿವಾರದಿಂದ 06-05-2025ನೇ ಮಂಗಳವಾರದವರೆಗೆ ಸಂಭ್ರಮದಲ್ಲಿ ನಡೆಯಲಿದೆ.

ದಿನಾಂಕ 4-05-2025ರ ಸಂಜೆ 4-00 ಗಂಟೆಯಿಂದ ತಂತ್ರಿಗಳ ಸ್ವಾಗತ. ವಾಸ್ತು ತಜ್ಞರಾದ ಶ್ರೀ ಮಂಜುನಾಥ ಭಟ್ ಬೈಲ್‌ಕೆರೆ ಉಡುಪಿ ಹಾಗೂ ದೇವಸ್ಥಾನ ನಿರ್ಮಿಸಿದ ಶಿಕ್ಷೆಯವರಾದ ಶ್ರೀ ಗಣೇಶ ಬಸ್ರೂರು ಸ್ವಾಗತದೊಂದಿಗೆ ಗೌರವಾರ್ಪಣೆ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿದೆ.

ದಿನಾಂಕ : 05-05-2025ನೇ ಸೋಮವಾರ ಗಂಟೆ 8.05ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಬ್ರಹ್ಮದೇವರ ಅಷ್ಟಬಂಧ ಪ್ರತಿಷ್ಠೆ ದಿವಾ ಘಂಟೆ 09-33 ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಗಣಪತಿ ದೇವರ ಅಷ್ಟಬಂಧ ಪ್ರತಿಷ್ಠೆ ದಿವಾ ಘಂಟೆ 12-05 ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾಗ ದೇವರ ಪ್ರತಿಷ್ಠೆ ಹಾಗೂ ಸಂಜೆ : 7.00ರಿಂದ ನಾಗದೇವರಿಗೆ ಆಶ್ಲೇಷ ಬಲಿ ನಡೆಯಲಿದೆ.

ದಿನಾಂಕ 06-05-2025 ಬೆಳಿಗ್ಗೆ 8-00 ರಿಂದ ಗುರುಗಣಪತಿ ಪೂಜೆ ಪುಣ್ಯಾಹ, ಬೆಳಿಗ್ಗೆ 9.30ಕ್ಕೆ ಬ್ರಹ್ಮ ದೇವರ ನುಡಿ ದರ್ಶನ, ಬೆಳಿಗ್ಗೆ 10.30ಕ್ಕೆ ನಾಗದೇವರ ನುಡಿ ದರ್ಶನ, ಶಾಂತಿ ಪ್ರಾಯಶ್ಚಿತ ಹೋಮ, ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ಮಹಾಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ಮಧ್ಯಾಹ್ನ 1-00ಕ್ಕೆ ಮಹಾ ಅನ್ನಸಂತರ್ಪಣೆ ಸಂಜೆ 6-00ಕ್ಕೆ ಗಣಪತಿ ದೇವರಿಗೆ ರಂಗಪೂಜೆ, ಹಾಗೂ ಎಲ್ಲಾ ದೇವರಿಗೆ ದೀಪೋತ್ಸವ ದೈವಗಳ ನುಡಿ ದರ್ಶನ ಮತ್ತು ಪ್ರಸಾದ ವಿತರಣೆ ಅನ್ನ ಸಂತರ್ಪಣೆ ರಾತ್ರಿ ಗಂಟೆ 9.00ರಿಂದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ನಡೆಯಲಿದೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು / ಅಧ್ಯಕ್ಷರು/ ಕಾರ್ಯದರ್ಶಿ/ ಸರ್ವಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments