ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಮರ್ಥ್ ಶೆಟ್ಟಿ ಡಿಸ್ಟಿಕ್ಷನ್ ಅಂಕ ಪಡೆದು ಸಾಧನೆ

ಪುತ್ತೂರಿನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 550 ಅಂಕಗಳನ್ನು ಪಡೆದು ಡಿಸ್ಟಿಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪುತ್ತೂರಿನ ಬೆಳ್ಳಾರೆ ನಿವಾಸಿಯಾಗಿರುವ ಪುಷ್ಪರಾಜ್ ಶೆಟ್ಟಿ ಮತ್ತು ಪ್ರಮೀಳಾ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಮಹತ್ತರ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 95,ಇಂಗ್ಲಿಷ್‌ನಲ್ಲಿ97, ಹಿಂದಿಯಲ್ಲಿ 92, ಗಣಿತದಲ್ಲಿ81 ವಿಜ್ಞಾನದಲ್ಲಿ 92,ಸಮಾಜ ವಿಜ್ಞಾನದಲ್ಲಿ 93 ಅಂಕಗಳನ್ನುಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪುಷ್ಪರಾಜ್ ಶೆಟ್ಟಿ ಅವರು ವಿ4 ನ್ಯೂಸ್‌ನ ಪ್ರಾದೇಶಿಕ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.
