HomeFresh Newsಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಕತ್ತಿ ಹಿಡಿದು ಭಯದ ವಾತಾವರಣ ಸೃಷ್ಡಿಸಿದ ಯುವಕ

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಕತ್ತಿ ಹಿಡಿದು ಭಯದ ವಾತಾವರಣ ಸೃಷ್ಡಿಸಿದ ಯುವಕ

ಮೂಡುಬಿದಿರೆ : ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಯುವಕನೋವ೯ ಕೈಯಲ್ಲಿ ಕತ್ತಿ ಹಿಡಿದು ಭಯದ ವಾತಾವರಣವನ್ನು ಸೃಷ್ಟಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಈತನನ್ನು ಬೆಳ್ತಂಗಡಿ ತಾಲೂಕಿನ ಪೆರಿಂಜೆಯ ಯುವಕ ಎಂದು ಗುರುತಿಸಲಾಗಿದೆ.

ಬಸ್ಟ್ ನಿಲ್ದಾಣದಲ್ಲಿ ರಾಜಾರೋಷವಾಗಿ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಮೊಬೈಲ್ ಅಂಗಡಿಗೆ ತೆರಳಿ ಅಲ್ಲಿದ್ದ ಯುವಕರಿಗೆ ಮೊಬೈಲ್ ಕೊಡುವಂತೆ ಬೆದರಿಸಿದ್ದಾನೆ ನಂತರ ಹೊರಗಡೆ ಬಂದು ತಲವಾರನ್ನು ಬೆನ್ನಿನ ಭಾಗದಲ್ಲಿ ಇರಿಸಿಕೊಂಡು ಕುಳಿತುಕೊಂಡಿದ್ದ.

ಈ ಬಗ್ಗೆ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments