ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಗೊನ್ಝಾಗ ಶಾಲೆಯ ಯುವರಾಜ್ ಗೆ ಚಿನ್ನದ ಪದಕ
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ಅವರು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಆಯೋಜಿಸಿದ ರಾಷ್ಟ್ರಮಟ್ಟದ 69ನೇ ನ್ಯಾಶನಲ್ ಸ್ಕೂಲ್ ಗೇಮ್ಸ್ ನ ಅಥ್ಲೆಟಿಕ್ಸ್ ನಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದು ಶಾಲೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. 23.37 ಸೆಕೆಂಡಿನಲ್ಲಿ ಈ ಸಾಧನೆಗೈದ ಯುವರಾಜ್ ಸಿ ಬಿ ಎಸ್ ಇ ಪರವಾಗಿ ರಾಷ್ಟ್ರಮಟ್ಟದ ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಮೊದಲ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯು ಡಿಸೆಂಬರ್ 1 ರಿಂದ 4 ರವರೆಗೆ ಮಧ್ಯಪ್ರದೇಶದ ಇಂದೋರ್ ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ ಅಲ್ಮೇಡ ಅವರು ಯುವರಾಜ್ ಅವರ ಈ ಅದ್ಭುತ ಸಾಧನೆಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದ ಪರವಾಗಿ ಅಭಿನಂದಿಸಿ, ಮುಂದಿನ ದಿನಗಳಿಗೂ ಇದೇ ರೀತಿಯ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.




















