ಬಿಎಂ ರೋಹಿಣಿ ಅವರಿಗೆ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ

ಬಿಎಂ ರೋಹಿಣಿ ಅವರಿಗೆ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭವು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ನಡೆಯಿತು.


ಶಿಕ್ಷಕಿಯಾಗಿದ್ದು, ಹಿರಿಯ ಲೇಖಕಿ ಆಗಿರುವ ಬಿ. ಎಂ. ರೋಹಿಣಿಯವರು ತಮ್ಮದೇ ಹೋರಾಟದ ಬದುಕು ಬಾಳಿದವರು. ಎಂಬತ್ತಮೂರನೆಯ ಪ್ರಾಯದಲ್ಲೂ ವಿರಮಿಸದ ಚೇತನ ಅವರದು. ವಿವಾದಾತ್ಮಕ, ವಿಚಾರಾತ್ಮಕ ಪುಸ್ತಕಗಳನ್ನು ಬರೆದು ಸೈ ಎನಿಸಿಕೊಂಡವರು.


ಎಸ್ ವಿಪಿ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ ನಾಗಪ್ಪ ಗೌಡ ಆರ್ ಗ್ರಂಥ ಅನಾವರಣ ಕಾರ್ಯಕ್ರಮ ನೆರವೇರಿಸಿದ್ರು. ಹಿತಿಯ ಲೇಖಕಿ ಡಾ ಹೆಚ್ ಎಸ್ ಅನುಪಮಾ ಗ್ರಂಥಾವಲೋಕನ ಮಾಡಿದ್ರು. ಕೆಥೋಲಿಕ್ ಧರ್ಮಪ್ರಾಂತ್ಯದ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೋ ಅಭಿನಂದನಾ ನುಡಿಗಳನ್ನಾಡಿದ್ದಾರೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕರಾದ ಪ್ರಜ್ಞಾ ರೋಹನ್ ಕುಮಾರ್ ನೆಲ್ಲಿಂಗೇರಿ ಹಗೂ ಪ್ರಣೀತ ಮೊಂತೆರೋ, ಪ್ರಾಂಶುಪಾಲರಾದ ಡಾ ಗಣಪತಿ ಗೌಡ ಅತಿಥಿಗಳಾಗಿ ಭಾಗವಹಿಸಿದರು.


ಸಭೆಯ ಅಧ್ಯಕ್ಷತೆಯನ್ನು ಮಾಜೀ ಶಾಸಕಿ, ಕಲೇವಾದ ಶಕುಂತಲಾ ಶೆಟ್ಟಿ ವಹಿಸಿದ್ದರು. ಬಿಲ್ಲವ ಮಹಿಳಾ ಸಂಘಟನೆಯ ಸುಮಲತಾ ಸುವರ್ಣ ಅವರು ಮಾತನಾಡಿ ಬಿಎಂಆರ್ ಅವರ ಸಂಕ್ಷಿಪ್ತ ಪರಿಚಯ ಮಾಡಿದರು. ಕಲೇವಾದ ಎಲ್ಲರೂ ಭಾಗವಹಿಸಿದ್ದರು. ಸಬಿಹಾ ಭೂಮಿಗೌಡ ನೇತೃತ್ವದ ಕೂಟವು ಅಭಿನಂದನಾ ಗ್ರಂಥವನ್ನು ಸಂಪಾದಿಸಿ ಕೊಟ್ಟಿದೆ.

Related Posts

Leave a Reply

Your email address will not be published.