Homeಕರಾವಳಿಕುದ್ರೋಳಿ ತೀರ್ಥಾಟನೆ ಸಂಪನ್ನ; ಹಳದಿ ಬಟ್ಟೆಯಲ್ಲಿ ಹರಿದು ಬಂದ ಉತ್ಸಾಹ

ಕುದ್ರೋಳಿ ತೀರ್ಥಾಟನೆ ಸಂಪನ್ನ; ಹಳದಿ ಬಟ್ಟೆಯಲ್ಲಿ ಹರಿದು ಬಂದ ಉತ್ಸಾಹ

1928ರಲ್ಲಿ ಶಿವಗಿರಿ ತೀರ್ಥಾಟಣೆ ಆರಂಭವಾದ ರೀತಿಯಲ್ಲೇ ಇಂದು ಕುದ್ರೋಳಿ ತೀರ್ಥಾಟನೆ ಸಂಪನ್ನಗೊAಡಿತು.


ಹಳದಿ ನದಿಯೇ ಹರಿದು ಬರುವಂತೆ ಜನಸಾಗರವು ಹಳದಿ ಬಟ್ಟೆಯೊಡನೆ ಶಾಂತಿಯುತ ಮೆರವಣಿಗೆಯು ರೈಲು ನಿಲ್ದಾಣದಿಂದ ಕುದ್ರೋಳಿ ಆಲಯಕ್ಕೆ ಸಾಗಿತು. 2008ರಲ್ಲಿ ಸ್ಥಳ ನೋಡಲು, 2009ರಲ್ಲಿ ಕೆಸರು ಕಲ್ಲು ಹಾಕಲು, 2012ರಲ್ಲಿ ಕುದ್ರೋಳಿ ಜನಪರ ಆಲಯ ಉದ್ಘಾಟನೆಗೆ ಗುರುಗಳ ಗುರು ನಾರಾಯಣ ಅವರು ಮಂಗಳೂರು ರೈಲು ನಿಲ್ದಾಣದ ಮೂಲಕ ಕುದ್ರೋಳಿಗೆ ಬಂದಿದ್ದರು.


ದೇವಾಲಯಗಳಿಗೆ ಬಹುಸಂಖ್ಯಾತ ಹಿಂದೂಗಳಿಗೆ ಪ್ರವೇಶ ಇಲ್ಲದಿದ್ದಾಗ ತಳ ಜನರಿಗಾಗಿ ದೇವಸ್ಥಾನ ತೆರೆದು, ತಳ ಜನರಿಂದಲೆ ಪೂಜೆ ಮಾಡಿಸಿ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಅವರ ತತ್ವಗಳು ಕೆಲವರಿಂದ ಬದಿಗೆ ಬಿದ್ದರೂ ಆ ಉತ್ಸಾಹ ಕುಂದಿಲ್ಲ. ಕಾಂಗ್ರೆಸ್, ಬಿಜೆಪಿ ಪಕ್ಷ ಭೇದವಿಲ್ಲದೆ ಹಲವರು ಮೆರವಣಿಗೆಯಲ್ಲಿ ಕಂಡು ಬಂದುದು ವಿಶೇಷ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments