ತೋಕೂರು: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.), ಎಸ್.ಕೋಡಿ, ತೋಕೂರು,ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯವರ ಪ್ರಾಯೋಜಕತ್ವದಲ್ಲಿ, ಜೆಸಿಐ ಸುರತ್ಕಲ್, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್-ಪಕ್ಷಿಕರೆ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಬಳ್ಕುಂಜೆ, ಮತ್ತು ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ, ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರ — “ಚಿಣ್ಣರ ಹಬ್ಬ 2026” ಇದರ ಸಮಾರೋಪ ಸಮಾರಂಭವನ್ನು ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಹರಿಪಾದೆಯವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಸತ್ಯಜಿತ್ ಸುರತ್ಕಲ್ ರವರು ಮಾತನಾಡಿ ಆಧುನಿಕತೆಯ ಸೋಗಿನಲ್ಲಿ ಮಕ್ಕಳ ಮನೋ ಬೆಳವಣಿಗೆಗಳು ಕುಂಠಿತವಾಗಿ ಬದುಕಿಗೆ ಮಾರಕವಾಗಬಾರದು ಸ್ವ ಚಿಂತನೆ ಮತ್ತು ಸ್ವ ಯೋಚನೆಯ ಗುಣಗಳನ್ನು ಮಕ್ಕಳು ಬಾಲ್ಯದಿಂದ ಮೈಗೂಡಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಡಾ. ಹರಿಕೃಷ್ಣ ಪುನರೂರು ರವರು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂಬುದಾಗಿ ತಿಳಿಸಿದರು.
ಜೆಸಿಐ ಸುರತ್ಕಲ್ ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಎನ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಒಂಬತ್ತು ಮಾಗಣೆ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ (ರಿ) ಮುಲ್ಕಿ ಇದರ ಅಧ್ಯಕ್ಷರಾದ ಎಸ್. ವಾಸು ಪೂಜಾರಿ, ಯುಗಪುರುಷ ಕಿನ್ನಿಗೋಳಿ ಇಲ್ಲಿನ ಪ್ರಧಾನ ಸಂಪಾದಕರಾದ ಶ್ರೀ ಕೊಡೆತ್ತೂರು ಭುವನಾಭಿರಾಮ ಉಡುಪ, ಕಾಳಿಕಾಂಬ ಮಹಿಳಾ ವೃಂದ ಕಿನ್ನಿಗೋಳಿ ಇದರ ಅಧ್ಯಕ್ಷರಾದ ಶ್ರೀಮತಿ ಅನಿತಾ ಪೃಥ್ವಿರಾಜ್ ಆಚಾರ್ಯ, ಸಂಘದ ಗೌರವಾಧ್ಯಕ್ಷರಾದ ಶ್ರೀ ಗುರುರಾಜ ಎಸ್ ಪೂಜಾರಿ, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಕೋಡಿಕಲ್, ಮಂದಿರದ ಅರ್ಚಕರಾದ ಶ್ರೀ ದಾಮೋದರ ಸುವರ್ಣ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಎ. ಕರ್ಕೇರ, ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪವನ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳಿಗೆ ಜೆಸಿಐ ಸುರತ್ಕಲ್ ವತಿಯಿಂದ ಉಡುಗೊರೆಯನ್ನು ವಿತರಿಸಿ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಏಳು ದಿನಗಳ ಕಾರ್ಯಕ್ರಮದ ವರದಿಯನ್ನು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಸುನಿತಾ ಗುರುರಾಜ್ ರವರು ವಿವರಿಸಿದರು, ಇನ್ನೋರ್ವ ಕಾರ್ಯದರ್ಶಿಯಾದ ಶ್ರೀಮತಿ ಬಬಿತಾ ಜೆ. ಸುವರ್ಣ ರವರು ಶಿಬಿರಕ್ಕೆ ಸಹಕಾರವನ್ನು ನೀಡಿರುವ ಎಲ್ಲಾ ಸದಸ್ಯರಿಗೆ ವಂದನೆಯನ್ನು ಸಲ್ಲಿಸಿದರು,
ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಹವೀಶ್ ಆರ್ ಕುಡ್ಲ,ಲಹರಿ, ನಿಶಿಕ ಪಿ. ಸಾಲ್ಯಾನ್ ಹಾಗೂ ಸ್ಮಯರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ಪೋಷಕರ ವಿಭಾಗದಲ್ಲಿ ಪೋಷಕರಾದ ಶ್ರೀಮತಿ ಉಷಾ ನರೇಂದ್ರ ಕೆರೆಕಾಡು ಮತ್ತು ಶ್ರೀಮತಿ ಗಾಯತ್ರಿ ರಾಜೇಶ್ ಕುಡ್ಲ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶಿಬಿರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ಪಕ್ಷಿಕೆರೆ ಇಲ್ಲಿನ ಪ್ರಾರ್ಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಮಾರ್ಗರೇಟ್ ಸುದರ್ಶಿನಿ ಮತ್ತು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಯಶೋಧ ಮತ್ತು ಶ್ರೀಮತಿ ಲತಾ ರವರು ಸಭೆಯಲ್ಲಿ ಭಾಗವಹಿಸಿದ ಪೋಷಕರಿಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯನ್ನು ನೆರವೇರಿಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ಶಿಬಿರಾರ್ಥಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಪದ್ಮಾವತಿ ಸಭಾಂಗಣದಲ್ಲಿ ನೆರವೇರಲ್ಪಟ್ಟಿತು.ಕಾರ್ಯಕ್ರಮದಲ್ಲಿ ಧನ್ಯವಾದವನ್ನು ಶ್ರೀ ಪವನ್ ಕುಮಾರ್ ರವರು ನೆರವೇರಿಸಿ ಕೊಟ್ಟರು.ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ಕಾರ್ಯಕ್ರಮವನ್ನು ನಿರೂಪಿಸಿದರು.
