HomeFresh Newsಪುತ್ತೂರಿನ ಸಾಲ್ಮರ ನಿವಾಸಿ ಸಯ್ಯದ್ ಶರಫುದ್ದೀನ್ ತಂಜಳ್ ನಿಧನ

ಪುತ್ತೂರಿನ ಸಾಲ್ಮರ ನಿವಾಸಿ ಸಯ್ಯದ್ ಶರಫುದ್ದೀನ್ ತಂಜಳ್ ನಿಧನ

ಪುತ್ತೂರು: ಪುತ್ತೂರಿನ ಸಾಲ್ಮರ ನಿವಾಸಿ ಸಯ್ಯದ್ ಶರಫುದ್ದೀನ್ ತಂಜಳ್ (50) ಮಂಗಳೂರಿನ ಯೇನೆಪೋಯ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಿ.ಹಸನ್ ಕೋಯ ತಂಜಳ್ ಅವರ ಪುತ್ರರಾಗಿರುವ ಶರಫುದ್ದೀನ್ ತಂಜಳ್ ಪತ್ನಿ ಹಾಗೂ ಪುತ್ರ ಸಯ್ಯದ್ ಅಲ್ ಹಾದಿ ಹಸನುಲ್ ಅಶ್ವರಿ ತಂಜಳ್ ಸೇರಿದಂತೆ ಸಹೋದರರಾದ ಸಯ್ಯದ್ ಅಲ್ ಹಾದಿ ಇಬ್ರಾಹೀಂ ತಂಜಳ್ ಆತೂರು ಮತ್ತು ಪೋಳ್ಯ ಜುಮಾ ಮಸೀದಿಯ ಖತೀಬರಾಗಿರುವ ಸಯ್ಯದ್ ಅಲ್ ಹಾದಿ ಯಹ್ಯಾ ತಂಜಳ್, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು ಬೆಳಿಗ್ಗೆ ಅವರ ಸ್ವಗೃಹದ ಬಳಿ ದಫನ ಕಾರ್ಯ ನಡೆಯಿತು.

ಮುಸ್ಲಿಂ ಧರ್ಮಗುರು, ದಾರುಲ್ ಹಸನಿಯ್ಯ ಹಿಷ್ಣುಲ್ ಕುರ್ ಆನ್‌ ಕಾಲೇಜಿನ ಸ್ಥಾಪಕರಾದ ಸಯ್ಯದ್ ಅಲ್‌ ಹಾದಿ ಶರಫುದ್ದೀನ್ ತಂಜಳ್ ಸಾಲ್ಮರ ಅವರ ನಿಧನಕ್ಕೆ ಶಾಸಕ ಅಶೋಕ್ ರೈ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments