Homeಕರಾವಳಿಕೋಳಿ ಸಾಗಾಟದ ಲಾರಿ ಚಾಲಕನ ಭೀಕರ ಕೊಲೆ

ಕೋಳಿ ಸಾಗಾಟದ ಲಾರಿ ಚಾಲಕನ ಭೀಕರ ಕೊಲೆ

​ ಮಂಜೇಶ್ವರ: ಸೀತಾಂಗೋಳಿ ಪೇಟೆಯ ನಿರ್ಜನ ಪ್ರದೇಶದ ಕಟ್ಟಡವೊಂದರ ಹಿಂಬದಿಯಲ್ಲಿ ಯುವಕನೊಬ್ಬನನ್ನು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಅತಿ ಭೀಕರವಾಗಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.

ಮುಂಡಿತ್ತಡ್ಕ ಸಮೀಪದ ಪಾಡ್ಲಡ್ಕ ನಿವಾಸಿ, ಕೋಳಿ ಸಾಗಾಟದ ಲಾರಿ ಚಾಲಕ ಸಫಾಯತ್ (30) ಕೊಲೆಯಾದ ದುರ್ದೈವಿ.​ ಮಂಗಳವಾರ ಮಧ್ಯಾಹ್ನದ ವೇಳೆಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಂಬಳೆ ಪೊಲೀಸರು ಹತ್ಯೆಗೆ ಬಳಸಲಾದ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಸಫಾಯತ್‌ನನ್ನು ಉದ್ದೇಶಪೂರ್ವಕವಾಗಿ ಜನರಿಲ್ಲದ ಜಾಗಕ್ಕೆ ಕರೆದೊಯ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

​ಪ್ರಸ್ತುತ ಮೃತದೇಹವನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸರು ಪರಿಸರದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಸಾವನ್ನಪ್ಪಿದ ವ್ಯಕ್ತಿಯ ಸ್ನೇಹಿತರ ವಲಯವನ್ನು ಕೇಂದ್ರೀಕರಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡವು ಕಾರ್ಯಾಚರಣೆ ಆರಂಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments