ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಹೊಸ ರಕ್ಷಣಾ ವೆಚ್ಚದ ವರದಿ ಬಿಡುಗಡೆ ಮಾಡಿದ್ದು, ಭಾರತವು ಇದರಲ್ಲಿ ಐದನೆಯ ಸ್ಥಾನದಲ್ಲಿದೆ.

ಶಾಂತಿ ಮಾತುಕತೆ ನಡೆದಂತೆಯೇ ಜಗತ್ತು ಯುದ್ಧ ಭೀತಿಯನ್ನು ಎದುರಿಸುತ್ತಿದೆ. ಹಾಗಾಗಿ ಪ್ರತಿಯೊಂದು ದೇಶವೂ ರಕ್ಷಣಾ ಬಾಬತ್ತಿಗೆ ಸಾಕಷ್ಟು ವೆಚ್ಚ ಮಾಡುತ್ತಿವೆ.

ಈ ವಿಷಯದಲ್ಲಿ ಭಾರತವು ಐದನೆಯ ಸ್ಥಾನದಲ್ಲಿ ಇದೆ. ಕಳೆದ ಹಣಕಾಸು ವರುಷದಲ್ಲಿ ಭಾರತದ ರಕ್ಷಣಾ ವೆಚ್ಚವು 8.9 ಶೇಕಡಾ ಹೆಚ್ಚಳ ಕಂಡಿದೆ; ಆದ ವೆಚ್ಚ 9,200 ಕೋಟಿ ಡಾಲರ್.

ಅಮೆರಿಕ ಸಂಯುಕ್ತ ಸಂಸ್ಥಾನ, ಚೀನಾ, ರಶಿಯಾ, ಜರ್ಮನಿ ದೇಶಗಳು ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

ಭಾರತವೂ ಸೇರಿ ಈ ಐದು ದೇಶಗಳು ಜಾಗತಿಕವಾಗಿ ಎಲ್ಲ ದೇಶಗಳ ರಕ್ಷಣಾ ವೆಚ್ಚದ 58 ಶೇಕಡಾ ಪಾಲನ್ನು ತಾವು ವ್ಯಯಿಸುತ್ತಿವೆ.

ಯುಎಸ್ಎ 95,400ಕೋಟಿ ಡಾಲರ್ ಹಾಗೂ ಚೀನಾವು 33,600 ಕೋಟಿ ಡಾಲರ್ ಈ ಬಾಬತ್ತು ವ್ಯಯಿಸಿವೆ.

