HomeFresh Newsಶಿವಮೊಗ್ಗ:ಆಭರಣ ಜ್ಯುವೆಲರ್ಸ್"ನ ನವೀಕೃತ ಬೃಹತ್ ಶೋರೂಂ ಉದ್ಘಾಟನೆ

ಶಿವಮೊಗ್ಗ:ಆಭರಣ ಜ್ಯುವೆಲರ್ಸ್”ನ ನವೀಕೃತ ಬೃಹತ್ ಶೋರೂಂ ಉದ್ಘಾಟನೆ

ವಿಶ್ವಾಸ, ಕುಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾದ ’ದ ಒರಿಜಿನಲ್ ಆಭರಣ’ ಸಂಸ್ಥೆಯ ವಿನೂತನ ಶೋರೂಂ ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪದ ಕುವೆಂಪು ರಸ್ತೆಯಲ್ಲಿ ಶುಭಾರಂಭಗೊಂಡಿತು.

ಉದ್ಘಾಟನಾ ಸಮಾರಂಭದ ಈ ಸುಸಂದರ್ಭದಲ್ಲಿ ಗ್ರಾಹಕರು, ಹಿತೈಷಿಗಳು ಮತ್ತು ಸ್ಥಳೀಯ ಸಮುದಾಯ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಇದು ನಗರದೊಂದಿಗೆ “ಆಭರಣ” ಬ್ರಾಂಡ್ ಗಳಿಸಿರುವ ಸುದೀರ್ಘ ಬಾಂಧವ್ಯವನ್ನು ಮತ್ತಷ್ಟು ಸುದೃಢಗೊಳಿಸಿತು.

ಉದ್ಘಾಟನಾ ಸಮಾರಂಭವು ಅಪಾರ ಅಭಿಮಾನಿಗಳ ಸಮಕ್ಷಮದಲ್ಲಿ, ಗಣ್ಯ ಅತಿಥಿಗಳ ಅಮೃತಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವಿಶಿಷ್ಟ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹದ ಅನಾವರಣ ಸಮಾರಂಭ – ನೆರೆದ ಜನಸ್ತೋಮದ ಕಣ್ಮನ ಸೆಳೆಯಿತು.

ಭಾಸ್ಕರ್ ಜಿ ಕಾಮತ್, ರೋಹಿಣಿ ಜಗದೀಶ್ ಪೈ ಹಾಗು ಮ್ರುದುಲ ರಂಜನ್ ಪೈ ಚಿನ್ನದ ಆಭರಣಗಳ ವಿಭಾಗದ ಶುಭಾರಂಭ ಮತ್ತು ಜ್ಯುವೆಲರಿ ಕಲೆಕ್ಷನ್‌ನ ಅನಾವರಣ ಮಾಡಿದರು.

ಅಶ್ವತ್ ನಾರಾಯಣ್ ಅವರು, ಬೆಳ್ಳಿಯ ಆಭರಣಗಳ ವಿಭಾಗದ ಶುಭಾರಂಭ ಮತ್ತು ಜ್ಯುವೆಲರಿ ಕಲೆಕ್ಷನ್ ನ ಅನಾವರಣ ಮಾಡಿದರು.

ಅಂಕಿತ ಅಮರ್, ಶ್ರೇಷ್ಟ ಭಂಡಾರಿ ಅವರು ವಜ್ರದ ಆಭರಣಗಳ ವಿಭಾಗದ ಶುಭಾರಂಭ ಮತ್ತು ಜ್ಯುವೆಲರಿ ಕಲೆಕ್ಷನ್ ನ ಅನಾವರಣ ಮಾಡಿದರು.

ಈ ಅದ್ದೂರಿಯ ಸಮಾರಂಭವನ್ನು “ದ ಒರಿಜಿನಲ್ ಆಭರಣ” ಕುಟುಂಬದ ಪ್ರಮುಖ ಸದಸ್ಯರಾದ ಮಧುಕರ್ ಎಸ್. ಕಾಮತ್, ಸುಭಾಸ್ ಎಂ. ಕಾಮತ್, ಮಹೇಶ್ ಎಂ. ಕಾಮತ್, ಶ್ರೀಮತಿ ಸಂಧ್ಯಾ ಎಸ್. ಕಾಮತ್, ಶ್ರೀಮತಿ ವೀಣಾ ಎಂ. ಕಾಮತ್, ಸಾತ್ವಿಕ್ ಕಾಮತ್, ಶ್ರೀ ಆಕರ್ಷ್ ಕಾಮತ್, ಕುಮಾರಿ ಶ್ಲೋಕಾ ಕಾಮತ್ ಮತ್ತು ಕುಮಾರಿ ಅದಿತ್ರಿ ಕಾಮತ್ ಇವರು ತುಂಬು-ಉತ್ಸಾಹದಿಂದ ನೆರವೇರಿಸಿಕೊಟ್ಟರು.

ದಿವಂಗತ ರಾಧಾ ಕಾಮತ್ ಅವರ ದಿವ್ಯ ಆಶೀರ್ವಾದ ಮತ್ತು ಗ್ರಾಮಾಂತರ ಮಾಜಿ ಶಾಸಕರು ಅಶೋಕ್ ನಾಯ್ಕ್ , ಗ್ರಾಮಾಂತರ ಈಗಿನ ಶಾಸಕಿ ಶಾರದ ಪೂರ್‍ಯಾ ನಾಯ್ಕ್ ,ನಗರಸಭ ಕಾರ್ಪೋರೇಟರ್ ವಿಶ್ವಾಸ್ , ಬಿ ವೈ ರಾಘವೇಂದ್ರ ಹಾಗು ರಮೇಶ್ ನಾಯಕ್ ಮೆಡಿಕಲ್ ಏಂಪೋರಿಯಮ್ ಉಡುಪಿ ಇವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ’ದ ಒರಿಜಿನಲ್ ಆಭರಣ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸುಭಾಸ್ ಎಂ. ಕಾಮತ್ ಅವರು ಮಾತನಾಡಿ, ನಮಗೆ ದೊರೆತ ಪ್ರೋತ್ಸಾಹ, ಬೆಂಬಲ ಕಂಡು ನಾವೆಲ್ಲ ಭಾವಪರವಶರಾಗಿದ್ದೇವೆ. ಈ ಸ್ಥಳಾಂತರವು ಕೇವಲ ಹೊಸ ವಿಳಾಸಕ್ಕೆ ಸೀಮಿತವಾಗಿಲ್ಲ, ಇದು ಶಿವಮೊಗ್ಗದ ನಮ್ಮ ಗ್ರಾಹಕರಿಗೆ ನಮ್ಮ ಮೇಲಿರುವ ಅಪಾರ ವಿಶ್ವಾಸವನ್ನು ಮತ್ತು ನಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಫಲಿಸುತ್ತದೆ. ನಾವು ಈ ಪರಸ್ಪರ ಬಾಂಧವ್ಯವನ್ನು ಇನ್ನಷ್ಟು ಅಂದಗಾಣಿಸುವತ್ತ ಕಂಕಣಬದ್ಧರಾಗಿದ್ದೇವೆ.” ಎಂದರು.

ಸಕಲ ಸವಲತ್ತುಗಳ ಐಷಾರಾಮಿ ಅನುಭವವನ್ನು ನೀಡಲು ಈ ಹೊಸ ವಿಶಾಲ ಶೋರೂಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ತನ್ನ ಬಂಗಾರ, ವಜ್ರ ಮತ್ತು ಮದುವೆಯ ಆಭರಣಗಳ ಆಯ್ದ ಪಾರಂಪರಿಕರ ಹಾಗೂ ಅತ್ಯಾಧುನಿಕ ಸಂಗ್ರಹಗಳ ಪ್ರದರ್ಶನದಿಂದ ಸಂದರ್ಶಕರನ್ನು ಮಂತ್ರಮುಗ್ಧಗೊಳಿಸಿತು. ಇದು ಆಭರಣದ ರಿಟೇಲ್ ವ್ಯಾಪಾರದ ಭವಿಷ್ಯಕ್ಕಾಗಿ ’ದ ಒರಿಜಿನಲ್ ಆಭರಣ’ದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತಿತ್ತು.

ಈ ಸಂದರ್ಭದಲ್ಲಿ ನಟಿ ಅಂಕಿತ ಅಮರ್, ಶ್ರೇಷ್ಟ ಭಂಡಾರಿ, ವಂದನ ಶಾನ್‌ಭಾಗ್,ಶ್ರೀಮತಿ ಶ್ರೀ ಗೀತಾ ಪೈ, ಗಜರದೇವಿ ಜಾದವ್, ಶೈಲಶ್ರೀ ಕಾಮತ್ ಶ್ರೀಮತಿ ರಂಗಲಕ್ಷ್ಮಿ ಸುಬ್ರಮಣ್ಯಮ್ ಮತ್ತಿತರರು ಉಪಸ್ಥಿತರಿದ್ದರು.

ಆರ್‌ಜೆ ನಿಕಿತ ಹಾಗು ಗೌರಿ ಕರ್ನಾಡ್ ಇವರು ಕಾರ್ಯಾಕ್ರಮ ನಿರೂಪಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments