Homeಕ್ರೈಮ್ದಿಲ್ಲಿಯಲ್ಲಿ ಮತ್ತೆ 'ನಿರ್ಭಯಾ' ಮಾದರಿಯ ಕೃತ್ಯ - ಬಸ್‌ನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇ*ಪ್

ದಿಲ್ಲಿಯಲ್ಲಿ ಮತ್ತೆ ‘ನಿರ್ಭಯಾ’ ಮಾದರಿಯ ಕೃತ್ಯ – ಬಸ್‌ನಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇ*ಪ್

2012ರ ಭೀಕರ ‘ನಿರ್ಭಯಾ’ ಘಟನೆಯನ್ನು ನೆನಪಿಸುವಂತಹ ಹೀನ ಕೃತ್ಯವೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ನಿಂತಿದ್ದ ಸ್ಲೀಪರ್ ಬಸ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಸಂಬAಧ ದೆಹಲಿ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಇಂದು ಬಂಧಿಸಿದ್ದಾರೆ.

ಪೀತಾಮ್‌ಪುರದ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಮಂಗಳಪುರಿಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೇ 11ರ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರಸ್ವತಿ ವಿಹಾರ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಸ್ಲೀಪರ್ ಬಸ್‌ವೊಂದನ್ನು ಕಂಡು ಸಮಯ ಕೇಳಲು ಹೋಗಿದ್ದರು. ಈ ವೇಳೆ ಬಸ್ಸಿನ ಬಾಗಿಲ ಬಳಿ ನಿಂತಿದ್ದ ವ್ಯಕ್ತಿ ಮಹಿಳೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದುಕೊಂಡಿದ್ದಾನೆ. ಬಳಿಕ ಬಸ್ಸನ್ನು ನಾಂಗ್ಲೋಯ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಅಲ್ಲಿ ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.


ವಿವಾಹಿತೆಯೂ ಹಾಗೂ ಮೂರು ಮಕ್ಕಳ ತಾಯಿಯೂ ಆಗಿರುವ ಸಂತ್ರಸ್ತೆಯ ದೂರನ್ನು ಆಧರಿಸಿ ದೆಹಲಿಯ ರಾಣಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಗೆ ಬಳಸಲಾದ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ಪೂರ್ಣಗೊಂಡಿದ್ದು, ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments