ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಶ್ರೀ ವಿಷ್ಣು ಯಕ್ಷಬಳಗ ವತಿಯಿಂದ ಆಯೋಜಿಸಲಾಗಿರುವ “ಶ್ರೀ ವಿಷ್ಣು ಯಕ್ಷ ವೈಭವ 2026” ಕಾರ್ಯಕ್ರಮ ಇದೀಗ ಭಾರೀ ಗಮನ ಸೆಳೆಯುತ್ತಿದೆ. ಇದೇ ಮೇ 17ರಂದು ಸಂಜೆ 4.30ರಿಂದ ನಡೆಯಲಿರುವ ಈ ಸಾಂಸ್ಕೃತಿಕ ಮಹೋತ್ಸವದಲ್ಲಿ ಯಕ್ಷಗಾನ ಬಯಲಾಟ, ಗಣ್ಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಾತ್ರಿ 7 ಗಂಟೆಗೆ “ಗುರುದಕ್ಷಿಣೆ” ಯಕ್ಷಗಾನ ಬಯಲಾಟ ನಡೆಯಲಿದ್ದು, ಬಳಿಕ “ಭಾಗವದ್ವಿಜಯ” ಪ್ರದರ್ಶನವೂ ಇರಲಿದೆ. ಯಕ್ಷಗಾನ ಅಭಿಮಾನಿಗಳು ಹಾಗೂ ಸ್ಥಳೀಯ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಕರಾವಳಿ ಭಾಗದಲ್ಲಿ ಯಕ್ಷಗಾನ ಪರಂಪರೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಜೇಶ್ವರ ಭಾಗದಲ್ಲಿ ಈಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕ ಹಾಗೂ ಕೇರಳ ಗಡಿಭಾಗದ ಕಲಾಭಿಮಾನಿಗಳು ಕೂಡ ಈ ಕಾರ್ಯಕ್ರಮದತ್ತ ಕಣ್ಣಿಟ್ಟಿದ್ದಾರೆ.
ಯಕ್ಷಗಾನ ಮತ್ತು ಕರಾವಳಿ ಸಾಂಸ್ಕೃತಿಕ ವೈಭವಕ್ಕೆ ಜನರಿಂದ ನಿರಂತರ ಬೆಂಬಲ ದೊರೆಯುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲೂ ಕಾಣಬಹುದು.
“ಶ್ರೀ ವಿಷ್ಣು ಯಕ್ಷ ವೈಭವ” ತಂಡದಿಂದ ನಿರಂತರ ಯಕ್ಷಗಾನ ಸಂಪೂರ್ಣ ರಾಮಾಯಣದ ವಿಶೇಷ ಎಪಿಸೋಡ್ಗಳು V4 News ನಲ್ಲಿ ಪ್ರಸಾರವಾಗುತ್ತಿದೆ.
