HomeFresh Newsಪಿಣರಾಯಿ ವಿಜಯನ್ ಮನೆಗೆ ಇ. ಡಿ. ದಾಳಿ

ಪಿಣರಾಯಿ ವಿಜಯನ್ ಮನೆಗೆ ಇ. ಡಿ. ದಾಳಿ

ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದವರು ಕೇರಳಂ ಮಾಜೀ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಗೆ ದಾಳಿ ಮಾಡಿದರು

ಪಿಎಂಎಲ್‌ಎ- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪಿಣರಾಯಿ ವಿಜಯನ್‌ರ ಮನೆ ಮತ್ತು ಸಂಬAಧಿತ ಹತ್ತು ನೆಲೆಗಳ ಮೇಲೆ ಮುಂಜಾನೆ ಇಡಿ- ಜಾರಿ ನಿರ್ದೇಶನಾಲಯದವರು ದಾಳಿ ಮಾಡಿದರು.

ಸಿಎಂಆರ್‌ಎಲ್- ಕೊಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್‌ಗಳ ಜೊತೆಗೆ ಪಿಣರಾಯಿ ವಿಜಯನ್‌ರಿಗೆ ಸಂಬAಧ ಇದೆಯೆಂದೂ, ಆ ಕಂಪೆನಿ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆಪಾದಿಸಲಾಗಿದೆ. ತಿರುವನಂತಪುರAನಲ್ಲಿ ಪಿಣರಾಯಿ ವಿಜಯನ್ ಅವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಆ ಮನೆ ಮತ್ತು ಕಂಪೆನಿಗೆ ಸೇರಿದ ಒಂಬತ್ತು ನೆಲೆಗಳ ಮೇಲೆ ಇಡಿ ದಾಳಿ ನಡೆಯಿತು

ಇಡಿ.ಯ ಅಕ್ರಮ ಹಣ ವರ್ಗಾವಣೆ ಆರೋಪದ ದಾಳಿಗೆ ತಡೆ ನೀಡಬೇಕು ಎಂದು ಸಿಎಂಆರ್‌ಎಲ್ ಕಂಪೆನಿಯು ಕೇರಳ ಹೈಕೋರ್ಟಿಗೆ ಹೋಗಿತ್ತು. ಉಚ್ಚ ನ್ಯಾಯಾಲಯವು ಹಾಗೆ ಅದೀತೆಂದು ನಿರೀಕ್ಷಿಸಲಾಗದು ಎಂದು ಆ ಅರ್ಜಿಯನ್ನು ವಜಾ ಮಾಡಿದೆ. ಅದರ ಬೆನ್ನಿಗೇ ಈ ದಾಳಿ ನಡೆದಿದೆ. ಪಿಣರಾಯಿ ವಿಜಯನ್‌ರ ಕುಟುಂಬ ಸಂಬAಧದ ಎಕ್ಸಾಲಾಜಿಕ್ ಸೊಲ್ಯೂಶನ್ ಸಂಸ್ಥೆಗೆ ಸಿಎಂಆರ್‌ಎಲ್ ಅಕ್ರಮ ಹಣ ವರ್ಗಾವಣೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಪಿಣರಾಯಿ ವಿಜಯನ್‌ರ ಮಗಳು ವೀಣಾ ತೈಕಾಂಡಿಯಲ್‌ರಿಗೆ ಸಿಎಂಆರ್‌ಎಲ್ ಕಂಪೆನಿ ಜೊತೆಗೆ ಸಂಬAಧವಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments