ಎಫ್‍ಡಿಐ- ವಿದೇಶೀ ನೇರ ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಸರಕಾರದ ನಿಯಮ ಮತ್ತು ಸಿಗುವ ನೆಲ ಜಲ ಮುಖ್ಯ, ಯುಎಸ್‍ಎ ಮುನ್ನಡೆ ಉಳಿಸಿಕೊಂಡಿದೆ.
ಆಮೆರಿಕ ಸಂಯುಕ್ತ ಸಂಸ್ಥಾನದ ಸಂಪತ್ತು ಅಲ್ಲಿ ಹೂಡಿಕೆಯಾಗುವ ವಿದೇಶೀ ನೇರ ಬಂಡವಾಳ ಹೂಡಿಕೆಯ ಮೇಲೆ ನಿಂತಿದೆ. ಸಿಂಗಾಪುರ, ಲಕ್ಸೆಂಬರ್ಗ್ ಮರಿ ನಾಡುಗಳು ಹಾಗೂ ಹಾಂಗ್ ಕಾಂಗ್ ವಿದೇಶೀ ನೇರ ಬಂಡವಾಳ ಸೆಳೆಯುವಲ್ಲಿ ಮೇಲಿವೆ ಎನ್ನುವುದು ವಿಶೇಷ. ಭಾರತವು ಹದಿನೈದನೆಯ ಸ್ಥಾನದಲ್ಲಿ ಇದ್ದು, 2,800 ಕೋಟಿ ಡಾಲರ್ ಎಫ್‍ಡಿಐ ಸೆಳೆದಿದೆ. ಯುಎನ್‍ಸಿಟಿಎಡಿ ನೀಡಿರುವ ಮಾಹಿತಿಯಂತೆ ಇದು ಒಂದು ವರುಷ ಹಿಂದಿನದು. ಈಗೀಗ ಹೂಡಿಕೆದಾರರು ಹೂಡಿಕೆ ಹಿಂಪಡೆಯುವುದು ಅಧಿಕರಿಸಿದೆ.
ಅತಿ ಹೆಚ್ಚು ಎಫ್‍ಡಿಐ ಸೆಳೆದು ಉದ್ಯಮ ಬಲಿಸಿಕೊಂಡ ಮೊದಲ ಸ್ಥಾನದ ದೇಶಗಳು ಮತ್ತು ಅಲ್ಲಿ ಹೂಡಿಕೆಯಾದ ವಿದೇಶೀ ನೇರ ಬಂಡವಾಳ ಹೂಡಿಕೆ ಮುಂದಿನಂತಿದೆ.
ಯುಎಸ್‍ಎ 27,900 ಕೋಟಿ ಡಾಲರ್, ಸಿಂಗಾಪುರ 14,300 ಕೋಟಿ ಡಾಲರ್, ಹಾಂಗ್ ಕಾಂಗ್ 12,600 ಕೋಟಿ ಡಾಲರ್, ಚೀನಾ 11,600 ಕೋಟಿ ಡಾಲರ್, ಲಕ್ಸೆಂಬರ್ಗ್ 10,600 ಕೋಟಿ ಡಾಲರ್, ಕೆನಡಾ 6,400 ಕೋಟಿ ಡಾಲರ್, ಬ್ರೆಜಿಲ್ 5,900 ಕೋಟಿ ಡಾಲರ್, ಆಸ್ಟ್ರೇಲಿಯಾ 5,300 ಕೋಟಿ ಡಾಲರ್, ಈಜಿಪ್ತ್ 4,780 ಕೋಟಿ ಡಾಲರ್, ಯುಎಇ 4,600 ಕೋಟಿ ಡಾಲರ್. ಹನ್ನೊಂದರಿದ ಹದಿನೈದರವರೆಗೆ ಕ್ರಮವಾಗಿ ಮೆಕ್ಸಿಕೋ, ಕ್ಯಾಮೆರುನ್ ದ್ವೀಪ, ಫ್ರಾನ್ಸ್, ಸ್ಪೆಯಿನ್, ಭಾರತಗಳು ಇವೆ.
