HomeFresh Newsನೀಟ್, ಸಿಬಿಎಸ್‍ಇ ಬಳಿಕ ಮತ್ತೊಂದು ಸಿಯುಇಟಿ ಪರೀಕ್ಷೆಯಲ್ಲಿ ಕರಾಮತ್ತು

ನೀಟ್, ಸಿಬಿಎಸ್‍ಇ ಬಳಿಕ ಮತ್ತೊಂದು ಸಿಯುಇಟಿ ಪರೀಕ್ಷೆಯಲ್ಲಿ ಕರಾಮತ್ತು

ಸಿಯುಇಟಿ-ಯುಜಿ= ಅಂಡರ್ ಗ್ರಾಜುಯೇಟ್‍ಗಳಿಗೆ ನಡೆಸುವ ಸಾಮಾನ್ಯ ವಿಶ್ವವಿದ್ಯಾನಿಲಯಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಗೋಲ್ಮಾಲ್ ಆಗಿದೆ ಎಂದು ಆಪಾದಿಸಲಾಗಿದೆ.ನೀಟ್ ಮತ್ತು ಸಿಬಿಎಸ್‍ಇ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಬಯಲಾಗಿ ಸಾಕಷ್ಟು ಗದ್ದಲ, ಗೊಂದಲ, ವಿದ್ಯಾರ್ಥಿಗಳ ಪೀಕಲಾಟ ನಡೆದಿತ್ತು. ಈಗ ಸಾಕಷ್ಟು ಪರೀಕ್ಷಾ ಕೇಂದ್ರಗಳಲ್ಲಿ ಸಿಇಯುಟಿ ಪರೀಕ್ಷೆಯು ತಡವಾಗಿದೆ. ಕೇಂದ್ರ ಸರಕಾರ ಮತ್ತು ಸಂಬಂಧಿತ ಇಲಾಖೆಗಳು ಸಮರ್ಪಕವಾಗಿ ಪರೀಕ್ಷೆ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಆಮ್ ಆದ್ಮಿ ಪಕ್ಷವು ಪ್ರತಿಭಟನೆ ನಡೆಸಿದೆ. ಅದೇ ರೀತಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಪ್ರಧಾನಿ ಮೋದಿಯವರ ನಿರ್ವಹಣೆಯ ವಿಫಲತೆಯೇ ಇದಕ್ಕೆ ಕಾರಣ ಎಂದು ದೂರಿದ್ದಾರೆ.

ಹಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಕಾದು ಕಾದು ಸುಸ್ತಾದರು. ಎನ್‍ಟಿಎ- ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ತಡವಾಗಲು ತಾಂತ್ರಿಕ ತೊಂದರೆ ಕಾರಣ ಎಂದಿದ್ದಾರೆ. ತಡವಾದುದರಿಂದ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಯ್ತೇ ಎಂದು ವಿದ್ಯಾರ್ಥಿಗಳು ಗೊಂದಲಗೊಂಡುದು ಸತ್ಯ. ಆದರೆ ಹಾಗೇನೂ ಆಗಿಲ್ಲ ಎಂದು ಎನ್‍ಟಿಎ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments