ಮಹಾರಾಷ್ಟ್ರದಲ್ಲಿ ಶಿವಸೇನೆ ಒಡೆದಂತೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಒಡೆಯಲು ಬಿಜೆಪಿ ಯೋಜಿಸಿದ್ದು, ಇದಕ್ಕೆ ಕೆಲವರು ಸಯ್ ಎಂದಿದ್ದಾರೆ ಎಂದು ವರದಿಯಾಗಿದೆ.

ಮಮತಾ ಬ್ಯಾನರ್ಜಿ ಮತ್ತು ಅವರ ಸೋದಲಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಇನ್ನೂ ಕೆಲವು ಬ್ಯಾನರ್ಜಿಗಳನ್ನು ಬಿಟ್ಟು ಪ್ರತ್ಯೇಕ ತೃಣಮೂಲ ಕಾಂಗ್ರೆಸ್ ಮಾಡುವುದು, ಇದಕ್ಕೆ ಮಹಾರಾಷ್ಟ್ರದಲ್ಲಿ ಶಿವಸೇನೆ ಒಡೆದ ಮಾದರಿಯನ್ನು ಅನುಸರಿಸುವುದು ಎಂದು ಸುದ್ದಿ ಎದ್ದಿದೆ.

ಇದನ್ನು ಕೆಲವರು ಗಾಳಿ ಸುದ್ದಿ ಎಂದಿದ್ದಾರೆ. ಮತ್ತೆ ಕೆಲವರು ಬೂದಿ ಮುಚ್ಚಿದ ಕೆಂಡವಿಲ್ಲದೆ ಹೊಗೆಯಾಡದು ಎಂದಿದ್ದಾರೆ.ಶಾಸಕರಾದ ರಿತುಬ್ರತ ಬಂಡೋಪಾಧ್ಯಾಯ, ಸಂದೀಪನ್ ಸಹಾ ಅವರನ್ನು ನಕಲಿ ಸಹಿ ಪ್ರಕರಣದಲ್ಲಿ ಟಿಎಂಸಿಯಿಂದ ಹೊರ ಹಾಕಲಾಗಿದೆ.

ಅವರನ್ನು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಸಂಪರ್ಕಿಸಿ ಮಹಾರಷ್ಟ್ರದಲ್ಲಿ ಶಿವಸೇನೆಗೆ ಮಾಡಿದ್ದನ್ನು, ಬಂಗಾಳದಲ್ಲಿ ಟಿಎಂಸಿಗೆ ಮಾಡಿ, ಬೇರೆಲ್ಲ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರಂತೆ.

ಪಕ್ಷದೊಳಗಿನ ಗುಂಪುಗಾರಿಕೆ ಮತ್ತು ಮಮತಾ ಬ್ಯಾನರ್ಜಿಯವರ ಕುಟುಂಬದ ಹಿಡಿತ ಹೆಚ್ಚಾದದ್ದು ಪಡುವಣ ಬಂಗಾಲದಲ್ಲಿ ಬಿಜೆಪಿ ಬಲಗೊಳ್ಳಲು ಕಾರಣವಾದ ಸಂಗತಿ ಎಂದು ಕೆಲವು ಟಿಎಂಸಿ ಶಾಸಕರು ಆಪಾದನೆ ಮಾಡಿದ್ದಾರೆ.

ಸಂಸದ ಅಭಿಷೇಕ್ ಬ್ಯಾನರ್ಜಿ, ಶಾಸಕ ಕಲ್ಯಾಣ್ ಬ್ಯಾನರ್ಜಿ ಹಾಗೂ ಸಾಕಷ್ಟು ಟಿಎಂಸಿ ನಾಯಕರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಇದು ಪಕ್ಷದ ಹಲವರು ಪಕ್ಷಾಂತರ ಮಾಡಲು ಪ್ರೇರಣೆ ನೀಡಿದೆ ಎಂದೂ ಹೇಳಲಾಗುತ್ತಿದೆ.

