HomeFresh Newsಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆ.10ರಂದು ವಿಶೇಷ ತುಪ್ಪದ ಅಪ್ಪ ಸೇವೆ

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆ.10ರಂದು ವಿಶೇಷ ತುಪ್ಪದ ಅಪ್ಪ ಸೇವೆ

ಉಚ್ಚಿಲ, ಆ.8: ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಯುಕ್ತ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಅತ್ಯಂತ ಪ್ರಿಯವಾದ ವಿಶೇಷ ತುಪ್ಪದ ಅಪ್ಪ ಸೇವೆ ಆಗಸ್ಟ್ 10ರಂದು ಸೋಮವಾರ ಅಪರಾಹ್ನ 3.30ರಿಂದ ಭಕ್ತಿಪೂರ್ವಕವಾಗಿ ನೆರವೇರಲಿದೆ.


ಶ್ರೀ ಕ್ಷೇತ್ರದ ಪರಂಪರೆಯ ಧಾರ್ಮಿಕ ಆಚರಣೆಯ ಭಾಗವಾಗಿ ಈ ವಿಶೇಷ ಸೇವೆಯನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಹಾಲಕ್ಷ್ಮೀ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಕ್ಷೇತ್ರದ ವತಿಯಿಂದ ವಿನಂತಿಸಲಾಗಿದೆ. ವಿಶೇಷ ತುಪ್ಪದ ಅಪ್ಪ ಸೇವೆಯನ್ನು ಸಮರ್ಪಿಸಲು ಇಚ್ಛಿಸುವ ಭಕ್ತಾದಿಗಳು ಶ್ರೀ ಕ್ಷೇತ್ರದ ಸೇವಾ ಕೌಂಟರ್‌ನಲ್ಲಿ ಸೇವಾ ರಶೀದಿಯನ್ನು ಪಡೆದುಕೊಳ್ಳಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments