ಡೆಹ್ರಾಡೂನಿನ ಸೇಲಕಿ ಪ್ರದೇಶದಲ್ಲಿ ಗಂಡನ ಮನೆಯವರು ಮೂವತ್ತೆರಡರ ಮಹಿಳೆಯನ್ನು ಹತ್ತು ತಿಂಗಳ ಕಾಲ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಾಖಂಡದ ರಾಜಧಾನಿಯಾದ ಡೆಹ್ರಾಡೂನಿನ ಸೇಲಕಿ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಎರಡು ವರುಷಗಳ ಹಿಂದೆ ದೆಹಲಿ ಕೇಂದ್ರೀಯ ವಿದ್ಯಾಲಯದ ಶಿಕ್ಷಕನ ಜೊತೆಗೆ ಈ ಮಹಿಳೆಯ ಮದುವೆಯಾಗಿತ್ತು. ಶಿಕ್ಷೆ ಕೊಡುವ ಕೇಂದ್ರದಂತೆ ಈತ, ಈತನ ಮನೆಯವರು ನಡೆದುಕೊಂಡಿದ್ದಾರೆ. ಮಹಿಳೆಯ ಗುಪ್ತಾಂಗಕ್ಕೆ ಬಾಟಲಿ ಮತ್ತು ದೊಣ್ಣೆಗಳಿಂದ ದಾಳಿ ಮಾಡಲಾಗಿದೆ.
ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ಸಂತ್ರಸ್ತೆಯ ತಂದೆಯಾಗಿದ್ದು, ಮಗಳನ್ನು ರಕ್ಷಿಸಿ ಕರೆದೊಯ್ಯುವಾಗ ಸೇಲಕಿ ಪೋಲೀಸು ಠಾಣೆಗೆ ದೂರು ನೀಡಿದ ಬಳಿಕವಷ್ಟೆ ಈ ಘೋರ ಘಟನೆ ಬೆಳಕಿಗೆ ಬಂದಿದೆ. ಕಾರಣ ಅಸ್ಪಷ್ಟ, ನನ್ನ ಮಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಹಿಂಸೆ ಅಧಿಕರಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಮದುವೆ ಆದ ಬೆನ್ನಿಗೇ ಗಂಡ ಮತ್ತು ಅತ್ತೆ ಶಿಕ್ಷೆ ನೀಡುವುದನ್ನು ಆರಂಭಿಸಿದ್ದರು.
ಗರ್ಭಿಣಿ ಮಗಳು ಹೆರಿಗೆಗೆ ಬಂದಿದ್ದಾಗ ಮಾತ್ರ ಸುಖ ಕಂಡದ್ದು ಎಂಬುದು ಸ್ಪಷ್ಟವಾಗಿದೆ. ಮನೆಗೆ ಕರೆದೊಯ್ದ ಮೇಲೆ ಗಂಡು ಹೆಣ್ಣು ಹಸುಗೂಸುಗಳನ್ನು ತಾಯಿಯಿಂದ ಬೇರೆ ಮಾಡಿ, ತಾಯಿಯನ್ನು ಶೌಚಾಲಯಕ್ಕೆ ದೂಡಲಾಗಿತ್ತು ಎಂದು ದೂರಲಾಗಿದೆ. ಅನ್ನ, ಈರುಳ್ಳಿ, ಹಸಿ ಮೆಣಸು ಬಿಟ್ಟು ಬೇರೆ ಊಟ ಕೂಡ ನೀಡಿಲ್ಲ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅವಳಿ ಹೆತ್ತ ಮಹಿಳೆಗೆ ಚಿತ್ರಹಿಂಸೆ;ಸಿಕ್ಕಿಬಿದ್ದ ಡೆಹ್ರಾಡೂನಿನ ಪಿಶಾಚಿಗಳು
RELATED ARTICLES

