ಕಾಂತಾವರ : ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ (ರಿ.) ಹಾಗೂ ಬ್ರಹ್ಮಶ್ರೀ ಗುರು ನಾರಾಯಣ ಭಜನಾ ಮಂಡಳಿ, ಕಾಂತಾವರ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ‘ಬಿರುವೆರೆ ಆಟಿದ ಕೂಟ’ ಕಾರ್ಯಕ್ರಮ ಆ.9ರಂದು ನಡೆಯಲಿದೆ.
ಕಾಂತಾವರದ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಬಿಲ್ಲವ ಸಂಘ ಕಾರ್ಕಳದ ಅಧ್ಯಕ್ಷ ಪ್ರಮಲ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಗುಜ್ಜರನ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಸ್ಕರ ಎಸ್. ಕೋಟ್ಯಾನ್, ಕೊಳಕೆ–ಇರ್ವತ್ತೂರು, ಅಧ್ಯಕ್ಷರು, ಶ್ರೀ ರಾಮ ಕ್ಷೇತ್ರ ದೇವಸ್ಥಾನ, ಅನೆಕೆರೆ, ಕಾರ್ಕಳ ಹಾಗೂ ಜಯಂತಿ ಎಸ್. ಪೂಜಾರಿ, ಅಧ್ಯಕ್ಷರು, ಬ್ರಹ್ಮಶ್ರೀ ಗುರು ನಾರಾಯಣ ಭಜನಾ ಮಂಡಳಿ, ಕಾಂತಾವರ ಅವರನ್ನು ಸನ್ಮಾನಿಸಲಾಗುವುದು.
ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ, ಕಾಂತಾವರದ ಅಧ್ಯಕ್ಷ ಬಾಂದೊಟ್ಟು ಸುದರ್ಶನ್ ಬಂಗೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಆಟಿಯ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಹಾಗೂ ಸಮಾಜದ ಬಾಂಧವ್ಯವನ್ನು ಬಿಂಬಿಸುವ ‘ಬಿರುವೆರೆ ಆಟಿದ ಕೂಟ’ ಕಾರ್ಯಕ್ರಮಕ್ಕೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಆತ್ಮೀಯವಾಗಿ ವಿನಂತಿಸಿ ಆಹ್ವಾನಿಸಿದ್ದಾರೆ.


