HomeFresh NewsV4 ನ್ಯೂಸ್ ಚಾನೆಲ್ ನ ಪುತ್ತೂರು ವರದಿಗಾರರಾದ ಪ್ರವೀಣ್ ಕುಮಾರ್ ಬೊಳುವಾರು ಅವರ ತಾಯಿ ಭಾಗೀರಥಿ...

V4 ನ್ಯೂಸ್ ಚಾನೆಲ್ ನ ಪುತ್ತೂರು ವರದಿಗಾರರಾದ ಪ್ರವೀಣ್ ಕುಮಾರ್ ಬೊಳುವಾರು ಅವರ ತಾಯಿ ಭಾಗೀರಥಿ ನಿಧನ

ಪುತ್ತೂರು: ಪುತ್ತೂರು ವಾಣಿ ಪ್ರಿಂಟರ್ಸ್ ಮಾಲಕರಾಗಿದ್ದ ದಿ.ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ (81 ವರ್ಷ ) ಅವರು ಜೂ.17 ರ ತಡ ರಾತ್ರಿ ಗಂ.12.15ಕ್ಕೆ ನಿಧನರಾಗಿದ್ದಾರೆ.ಬೊಳುವಾರು ನಿವಾಸಿಯಾಗಿದ್ದ ಭಾಗೀರಥಿ ಅವರು ಅನಾರೋಗ್ಯದಿಂದ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಚಿಕಿತ್ಸೆಗೆ ಸ್ಪಂಧಿಸದೆ ಅವರು ನಿಧನರಾಗಿದ್ದರೆ. ಮೃತರು ಪುತ್ರರಾದ v4 ನ್ಯೂಸ್, ನಮ್ಮ ಪುತ್ತೂರು ಚಾನೆಲ್ ನ ವಾರದಿಗಾರ ಪ್ರವೀಣ್ ಕುಮಾರ್ ಬೊಲ್ವಾರ್,ವಾಣಿ ಪ್ರಿಂಟರ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ನೀಲಂತ್, ಪುತ್ರಿ ಬೆಂಗಳೂರಿನಲ್ಲಿರುವ ಡಾ.ವಾಣಿ ಮತ್ತು ಸೊಸೆಯಂದಿರಾದ ಅಶ್ವಿನಿ ಪ್ರವೀಣ್‌, ಜ್ಯೋತಿ ನೀಲಂತ್, ಅಳಿಯ ಅನಂತ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾ‌ರ್ ಪುತ್ತಿಲ, ರಾಜೇಶ್ ಬನ್ನೂರು, ಯು. ಲೊಕೇಶ್ ಹೆಗ್ಡೆ ಮೊದಲಾದವರು ಮನೆಗೆ ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತಿಮ ವಿಧಿವಿಧಾನಗಳು ಜೂನ್ 19ರಂದು ನಾಳೆ ಬೆಳಿಗ್ಗೆ 9 ಗಂಟೆಗೆ ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments