HomeFresh Newsನಾಗಪುರದ ಪರೀಕ್ಷಾರ್ಥಿಗೆ ಅಬುದಾಬಿ | ಮರು ನೀಟ್ ಪರೀಕ್ಷೆಯ ಅವಾಂತರ | ಪರೀಕ್ಷಾ ಕೇಂದ್ರ ಅಲ್ಲುಂಟು...

ನಾಗಪುರದ ಪರೀಕ್ಷಾರ್ಥಿಗೆ ಅಬುದಾಬಿ | ಮರು ನೀಟ್ ಪರೀಕ್ಷೆಯ ಅವಾಂತರ | ಪರೀಕ್ಷಾ ಕೇಂದ್ರ ಅಲ್ಲುಂಟು ಎಲ್ಲುಂಟು

ನೀಟಾಗಿ ನೀಟ್ ಪರೀಕ್ಷೆ ನಡೆಸಲಾಗದವರು ಎಂಬ ಟೀಕೆಯ ನಡುವೆ ಮತ್ತೊಮ್ಮೆ ನೀಟ್ ಮರು ಪರೀಕ್ಷೆಯಲ್ಲೂ ಅವಾಂತರ ಬಯಲಿಗೆ ಬಂದಿದೆ. ಪ್ರಶ್ನೆ ಪತ್ರಿಕೆ ಕದ್ದು ಮಾರಾಟ, ಪ್ರಶ್ನೆ ಪತ್ರಿಕೆ ತಯಾರಿಸುವ ಪ್ರೊಫೆಸರ್‌ಗಳಿಂದಲೇ ಅಪರಾ ತಪರಾ ನಡೆದಿದ್ದ ಕಾರಣಕ್ಕೆ ನಡೆದ ನೀಟ್ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು.

ನೀಟ್ ಮರುಪರೀಕ್ಷೆ ಜೂನ್ 21ಕ್ಕೆ ನಡೆಯುವ ಹೊತ್ತಿನಲ್ಲಿ ಅನೀಟ್ ವರದಿಯಾಗಿದೆ. ಎನ್‌ಟಿಎ ಇಲ್ಲಿ ಕೂಡ ನೀಟಾಗಿ ಪರೀಕ್ಷೆ ಏರ್ಪಾಟು ಮಾಡಿಲ್ಲ ಎಂಬುದು ಕಂಡುಬಂದಿದೆ. ನಾಗಪುರದ ಪರೀಕ್ಷಾರ್ಥಿ ಒಬ್ಬರಿಗೆ ಅಬುದಾಬಿ ಪರೀಕ್ಷಾ ಕೇಂದ್ರದ ವಿಳಾಸ ತೋರಿಸಲಾಗಿದೆ.

ಭಾರತದ ಎನ್‌ಟಿಎ ವಿದೇಶದಲ್ಲಿ ಪರೀಕ್ಷಾ ಕೇಂದ್ರ ಹೇಗೆ ಹೊಂದಲು ಸಾಧ್ಯ? ರೀ ನೀಟ್ ವೆಬ್‌ಸೈಟ್‌ನಿಂದ ಪರೀಕ್ಷಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಅವರು ತನ್ನ ಪರೀಕ್ಷಾ ಕೇಂದ್ರದ ಬಗೆಗೆ ಮಾಹಿತಿ ಇಳಿಸಿಕೊಂಡು ದಿಗಿಲಾದರು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುದಾಬಿಯಲ್ಲಿ ಪರೀಕ್ಷಾ ಕೇಂದ್ರ ಎಂದು ಅದರಲ್ಲಿ ನಮೂದಿಸಲಾಗಿತ್ತು.

ನಾಗಪುರದ ಪರೀಕ್ಷಾರ್ಥಿಗೆ ಸುತ್ತಮುತ್ತ ಹೋಗಲಿ, ದೇಶದಲ್ಲೇ ಪರೀಕ್ಷಾ ಕೇಂದ್ರ ಅಲ್ಲ ಎಂದರೆ ಏನರ್ಥ? ಈ ಮಾಹಿತಿಯ ಸ್ಕ್ರೀನ್ ಶಾಟ್ ಅಂತರಜಾಲದಲ್ಲಿ ಓಡಾಡುತ್ತಿದೆ. ಅಭ್ಯರ್ಥಿಯು ವಿಷಯವನ್ನು ಎನ್‌ಟಿಎ ಗಮನಕ್ಕೂ ತಂದಿದ್ದಾರೆ. ಸದ್ಯ ತಾಂತ್ರಿಕ ದೋಷದ ಕಾರಣವನ್ನು ನೀಡಿರುವ ಎನ್‌ಟಿಎ, ಬದಲಿ ಕೇಂದ್ರ ತಿಳಿಸುವುದಾಗಿ ಹೇಳಿದೆ. ಪರೀಕ್ಷೆಯು ಜೂನ್ 21ರಂದೇ ಇದೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments