HomeFresh Newsರಾಮ ಮಂದಿರದ ಆಡಳಿತ ಮಂಡಳಿ ತೊಲಗಲಿ;ಮಂದಿರ ನಿರ್ಮಾಣ ಸಮಿತಿಯ ನೃಪೇಂದ್ರ ಮಿಶ್ರಾ

ರಾಮ ಮಂದಿರದ ಆಡಳಿತ ಮಂಡಳಿ ತೊಲಗಲಿ;ಮಂದಿರ ನಿರ್ಮಾಣ ಸಮಿತಿಯ ನೃಪೇಂದ್ರ ಮಿಶ್ರಾ

ಅಯೋಧ್ಯೆಯ ರಾಮ ಮಂದಿರದಲ್ಲಿ ಎಲ್ಲ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ, ಪೂರ್ಣ ಆಡಳಿತ ಮಂಡಳಿ ತೊಲಗಬೇಕು ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಅಯೋಧ್ಯೆಯ ರಾಮ ಮಂದಿರದ ಎಲ್ಲ ಹಂತದಲ್ಲಿ ಅವ್ಯವಹಾರ ನಡೆದಿದೆ. ವ್ಯಾಪಕ ಅಕ್ರಮವಾಗಿದೆ. ಗಂಭೀರ ಲೋಪಗಳು ಕಂಡಿವೆ. ಮೇಲ್ವಿಚಾರಣೆ, ಉತ್ತರದಾಯಿತ್ವ, ನಿಯಮಾವಳಿ ಉಲ್ಲಂಘಿಸಲಾಗಿದೆ. ಹಣದ ಸರಿಯಾದ ಲೆಕ್ಕ ಹೇಳುವವರಿಲ್ಲ; ಕೇಳುವವರಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳಿದರು.

ರಾಮ ಮಂದಿರದ ಭ್ರಷ್ಟಾಚಾರವು ಭಕ್ತರ ನಂಬಿಕೆಗೆ ಹೊಡೆತ ನೀಡಿರುವುದರ ಜೊತೆಗೆ ರಾಮ ಮಂದಿರದ ಆಡಳಿತಾತ್ಮಕ ಲೋಪವನ್ನು ಬಯಲಿಗೆ ತಂದಿದೆ. ಏಳು ಕೋಟಿಗೂ ಹೆಚ್ಚು ಹಣದ ದುರುಪಯೋಗ ಆಗಿದೆ. ದೇಣಿಗೆ ಲೆಕ್ಕಾಚಾರದಲ್ಲೂ ವಂಚನೆ ಆದಂತಿದೆ. ಆದ್ದರಿಂದ ರಾಮ ಮಂದಿರದ ಇಡೀ ಆಡಳಿತ ಮಂಡಳಿ ತೊಲಗಬೇಕು. ಪಾರದರ್ಶಕ ಹೊಸ ಮಂಡಳಿ ಬರಬೇಕು ಎಂದು ಅವರು ಹೇಳಿದರು.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments