HomeFresh Newsಬಡ ಮಹಿಳೆಗೆ ನೆರವಾದ ಶೌರ್ಯ ಸುಳ್ಯ - "ನೂತನ ಮನೆ ಹಸ್ತಾಂತರ''

ಬಡ ಮಹಿಳೆಗೆ ನೆರವಾದ ಶೌರ್ಯ ಸುಳ್ಯ – “ನೂತನ ಮನೆ ಹಸ್ತಾಂತರ”

ಸುಳ್ಯ: ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಸುಳ್ಯ, ಶೌರ್ಯ ವಿಪತ್ತು ಘಟಕ ಸುಳ್ಯ ವಲಯದ ಸದಸ್ಯರು ನಿರ್ಮಿಸಿದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ, ಸವಿತಾ ಅಂಜಿಕಾರುರವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ವೆಂಕಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಮನೆ ಕೊಟ್ಟಿರೋದು ವಿಶೇಷ ಸಾಧನೆ ಎಂದರು. ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕನೆಮಾರಡ್ಕ ರವರು ಮಾತನಾಡಿ ಶೌರ್ಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ತಾಲ್ಲೂಕು ಯೋಜನಾಧಿಕಾರಿಗಳು ಸುಳ್ಯ ಶೌರ್ಯ ಘಟಕ 17ಮಂದಿ ಹೊಂದಿದ್ದು ವೃತ್ತಿ ನೈಪುಣ್ಯಾತೆ ಹೊಂದಿರುವವರಾಗಿರುತ್ತಾರೆ. ಕಳೆದ 2ವರ್ಷದ ಹಿಂದೆ ಸವಿತಾ ಗುಡಿಸಲು ಮನೆ ಬಿದ್ದು ಸಮಸ್ಯೆ ಯಲ್ಲಿ ಸಿಲುಕಿದ್ದಾಗ, ಶೌರ್ಯ ಸದಸ್ಯರು ಕೂಡಲೇ ಭೇಟಿ ನೀಡಿ ಗುಡಿಸಲು ಸರಿ ಮಾಡಿಕೊಟ್ಟರುತ್ತಾರೆ ನಂತರ ದಲ್ಲಿ ಅವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆ ಭರವಸೆ ಇವತ್ತು ಈಡೇರಿದೆ. ಇವತ್ತು ಹಸ್ತoತರ ಮಾಡುತಿರುವುದು ಸಂತೋಷ ವ್ಯಕ್ತಿಪಡಿಸಿ ಮನೆ ಹಸ್ತoತರ ಮಾಡಿದರು.

ಕಾರ್ಯಕ್ರಮದಲ್ಲಿ ವಲಯ ಜನಜಾಗೃತಿ ವಲಯಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಸದಸ್ಯರಾದ ಜಿನ್ನಪ್ಪ ಪೂಜಾರಿ, ಬೂಡು ರಾಧಾಕೃಷ್ಣ ರೈ, ಒಕ್ಕೂಟ ಅಧ್ಯಕ್ಷರಾದ ಬಾಲಚಂದ್ರ, ಚಂದ್ರಶೇಖರ ನೆಡಚಿಲ್, ಭಜನಪರಿಷತ್ ಮಾಜಿ ಗೌರವಧ್ಯಕ್ಷರಾದ ಶಿವಪ್ರಸಾದ್ ಅಲೆಟ್ಟಿ, ಶೌರ್ಯ ಮಾಸ್ಟರ್ ಜಯರಾಮ್ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಶೌರ್ಯ ಸದಸ್ಯರು ಭಾಗವಹಿಸಿದರು.ಸದಸ್ಯರಾದ ರದೀಷ ರವರು ಯೋಜನೆಯ ಕಾರ್ಯಕ್ರಮಗಳ ಪ್ರೇರಣೆ ಯಿಂದ ಈ ಕೆಲಸ ಮಾಡಿದ್ದೇವೆ ಎಂದರು. ಮನೆ ಪಡೆದ ಸವಿತಾ ರವರು ತಮ್ಮ ಅನುಭವದಲ್ಲಿ ಕಷ್ಟ ಕಾಲದಲ್ಲಿ ಮಂಜುನಾಥ ಸ್ವಾಮಿ ನಿಮ್ಮ ರೂಪದಲ್ಲಿ ಬಂದು ಸಹಾಯ ಮಾಡಿದ್ದೀರಾ ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ ವೆಂದು ಭಾವುಕ ರಾದರು ಸುರೇಶ್ ನಿರೂಪಿಸಿ ಮೇಲ್ವಿಚಾರಕ ದಿನೇಶ್ ಸ್ವಾಗತಿಸಿದರು. ಕಾರ್ಯಕ್ರಮದ ವಿಶೇಷತೆ ಮನೆಗೆ ಸುಮಾರು 2,97,000ಖರ್ಚು ಆಗಿದ್ದು, ಸದಸ್ಯರು ಭರಿಸಿರುತ್ತಾರೆ, ಹಗಲು ತಮ್ಮ ಕೆಲಸ ಮಾಡಿ ಸಂಜೆ 6ರಿಂದ 12ಗಂಟೆವರೆಗೂ ಕೆಲಸ ಮಾಡಿರುತ್ತಾರೆ, ವೆಲ್ಡಿಂಗ್, ಗಾರೆ, ಪೇಂಟಿಂಗ್,ವಿದ್ಯುತ್ ವಯರಿಂಗ್ ಕೆಲಸ ಸಂಪೂರ್ಣ ಕೆಲಸ ವನ್ನು ಶೌರ್ಯ ಸದಸ್ಯರೇ ಮಾಡಿರುವುದು ವಿಶೇಷ, ಶೌರ್ಯ ದಲ್ಲಿ ಎಲ್ಲ ಸದಸ್ಯರು 42ವರುಷದ ಒಳಗೆ ಇರುವುದು ವಿಶೇಷ.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments