ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ, ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ.ಯವರಿಗೆ ಜೂನ್ 25, 2026 ರಂದು ಭಾರತ ಸರ್ಕಾರವು ಅಧಿಕೃತವಾಗಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ನಲ್ಲಿ ಗೌರವ ಕರ್ನಲ್ ಹುದ್ದೆ ಮತ್ತು ‘ಕರ್ನಲ್ ಕಮಾಂಡೆಂಟ್’ (ಸಂಖ್ಯೆ: UN/NOTICE*/2026/102) ಆಗಿ ನೇಮಕ ಮಾಡಿದೆ.
ಈ ಗೌರವಕ್ಕಾಗಿ ಎನ್.ಸಿ.ಸಿ. ಪ್ರಧಾನ ಕಚೇರಿ, ಮಂಗಳೂರು ಗ್ರೂಪ್ ನವರು ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್ಜೆ ಅವರನ್ನು ಈ ಮಹಾನ್ ಗೌರವಕ್ಕಾಗಿ ಶಿಫಾರಸು ಮಾಡಿದ್ದರು.
ಈ ವಿಶಿಷ್ಟ ರಾಷ್ಟ್ರೀಯ ಮನ್ನಣೆಯನ್ನು ಮೇ 02, 2026 ರಂದು ಭಾರತದ ಅಧಿಕೃತ ಗೆಜೆಟ್ನಲ್ಲಿ ವಿವರಿಸಲಾಗಿದೆ. ಕುಲಪತಿಗಳು ಈ ಗೌರವ ಹುದ್ದೆಯನ್ನು ತಮ್ಮ ಕಚೇರಿಯ ಅವಧಿಯ ತನಕ ಹೊಂದಿರುತ್ತಾರೆ. ಈ ಐತಿಹಾಸಿಕ ಮೈಲಿಗಲ್ಲು ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಅವರ ಅಸಾಧಾರಣ ನಾಯಕತ್ವವನ್ನು
ಪ್ರತಿಬಿಂಬಿಸುತ್ತದೆ ಮತ್ತು ಎನ್ಸಿಸಿ ಮೂಲಕ ಶಿಸ್ತು, ನಾಗರಿಕ ಜವಾಬ್ದಾರಿ ಹಾಗೂ ಯುವ ನಾಯಕತ್ವವನ್ನು ಬೆಳೆಸುವಲ್ಲಿ ಸಂಸ್ಥೆಯ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ.
ಅವರು 2026ರ ಜುಲೈ ತಿಂಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳಿಂದ (ಎನ್ಸಿಸಿ ಅಧಿಕಾರಿಗಳು) ಈ ಗೌರವವನ್ನು ಸ್ವೀಕರಿಸಲಿದ್ದಾರೆ.
ವಿಶ್ವವಿದ್ಯಾನಿಲಯದ ಬೆಳವಣಿಗೆ ಮತ್ತು ಯಶಸ್ಸಿಗೆ ಗಣನೀಯವಾಗಿ ಕೊಡುಗೆ ನೀಡಿದ ಬಲವಾದ ನಾಯಕತ್ವ ಮತ್ತು ಅಚಲ ಬದ್ಧತೆಗಾಗಿ ಭಾರತ ಸರ್ಕಾರದಿಂದ ಈ ಪ್ರತಿಷ್ಠಿತ ಗೌರವವನ್ನು ಸಾಧಿಸಿದ್ದಕ್ಕಾಗಿ ಅಲೋಶಿಯಸ್ ವಿವಿಯ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್ಜೆ ಅವರನ್ನು ಅಭಿನಂದಿಸಿದ್ದಾರೆ.
ಅಲೋಶಿಯಸ್ ವಿವಿ ಕುಲಪತಿಯವರಿಗೆ ಕರ್ನಲ್ ಕಮಾಂಡೆಂಟ್ ಗೌರವ ಪ್ರಶಸ್ತಿ
RELATED ARTICLES

