HomeFresh Newsಬಳ್ಳಾರಿಯಲ್ಲಿ ಕಾಲೇಜು ಉಪನ್ಯಾಸಕನ ಕಾಮಕ್ರೀಡೆ; ವಿದ್ಯಾರ್ಥಿನಿ ಮೇಲೆ ಅ*ತ್ಯಾ*ಚಾರ ಎಸಗಿದ ಖಾಸಗಿ ಕಾಲೇಜು ಉಪನ್ಯಾಸಕ ಬಂಧನ!

ಬಳ್ಳಾರಿಯಲ್ಲಿ ಕಾಲೇಜು ಉಪನ್ಯಾಸಕನ ಕಾಮಕ್ರೀಡೆ; ವಿದ್ಯಾರ್ಥಿನಿ ಮೇಲೆ ಅ*ತ್ಯಾ*ಚಾರ ಎಸಗಿದ ಖಾಸಗಿ ಕಾಲೇಜು ಉಪನ್ಯಾಸಕ ಬಂಧನ!

ಬಳ್ಳಾರಿ: ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ, ವಿದ್ಯಾರ್ಥಿನಿಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಳಿಕ ಆಕೆಯ ಮೇಲೆ ಅ*ತ್ಯಾ*ಚಾರ ಎಸಗಿದ ಖಾಸಗಿ ಕಾಲೇಜಿನ ಉಪನ್ಯಾಸಕನನ್ನು ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರವಿಕಿರಣ್ (43) ಬಂಧಿತ ಆರೋಪಿ. ಈತ ಬಳ್ಳಾರಿಯ ತಾಳೂರು ರಸ್ತೆಯ ಶ್ರೀಧರಗಡ್ಡೆ ಗ್ರಾಮದ ಬಳಿ ಇರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕಳೆದ 2025ರ ಜೂನ್ ತಿಂಗಳಿನಿಂದ ಸಸ್ಯಶಾಸ್ತ್ರ (Botany) ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕಾರಿನಲ್ಲೇ ಅತ್ಯಾಚಾರ, ಫೋಟೋ ಇಟ್ಟುಕೊಂಡು ಬೆದರಿಕೆ! ಆರೋಪಿ ರವಿಕಿರಣ್ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ನಗರದ ಹೊರವಲಯದಲ್ಲಿ ಕಾರಿನಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಕೃತ್ಯ ಎಸಗುವಾಗ ಮೊಬೈಲ್‌ನಲ್ಲಿ ಫೋಟೋಗಳನ್ನು ತೆಗೆದುಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಆರೋಪಿ: ವಿಷಯ ತಿಳಿದ ವಿದ್ಯಾರ್ಥಿನಿಯ ಪೋಷಕರು ತಕ್ಷಣ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ರವಿಕಿರಣ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳಾ ಠಾಣೆ ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments