HomeFresh Newsಕ್ಯಾನ್ಸರ್ ಪೀಡಿತ ದೀಪಕ್ ದೇವಾಡಿಗ ಅವರಿಗೆ ಧನಸಹಾಯ

ಕ್ಯಾನ್ಸರ್ ಪೀಡಿತ ದೀಪಕ್ ದೇವಾಡಿಗ ಅವರಿಗೆ ಧನಸಹಾಯ

ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ವತಿಯಿಂದ 617ನೇ ಸೇವಾ ಯೋಜನೆಯ ಅಂಗವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನೆಹರುನಗರ ನಿವಾಸಿ ಶ್ರೀ ದೀಪಕ್ ದೇವಾಡಿಗ ಅವರ ವೈದ್ಯಕೀಯ ಚಿಕಿತ್ಸೆಗೆ ₹20,000 ಧನಸಹಾಯವನ್ನು ಭಾನುವಾರ ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು. ಸೇವಾ ಕಾರ್ಯಕ್ಕೆ ಧನಸಹಾಯ ಹಾಗೂ ಸಹಕಾರ ನೀಡಿದ ಎಲ್ಲಾ ದಾನಿಗಳು, ಸೇವಾ ಬಂಧುಗಳು ಮತ್ತು ಹಿತೈಷಿಗಳಿಗೆ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments